ಕರ್ನಾಟಕ

karnataka

By

Published : Nov 4, 2022, 3:53 PM IST

ETV Bharat / state

ವಿನಯ್ ಗುರೂಜಿ ಆಶ್ರಮಕ್ಕೆ ಬಂದು ಹೋಗಿದ್ದ ಚಂದ್ರಶೇಖರ್

ತನ್ನ ಸ್ನೇಹಿತ ಕಿರಣ್​ನೊಂದಿಗೆ ಚಂದ್ರಶೇಖರ್ ಅವರು 30-10-2022ರ ಭಾನುವಾರ ರಾತ್ರಿ 9.45ಕ್ಕೆ ಗೌರಿಗದ್ದೆ ಆಶ್ರಮಕ್ಕೆ ಬಂದು ವಿನಯ್ ಗುರೂಜಿ ಆರ್ಶೀವಾದ ಪಡೆದಿದ್ದಾರೆ. ರಾತ್ರಿ 10 ಗಂಟೆಗೆ ಕೊಪ್ಪ ಬಸ್ ನಿಲ್ದಾಣದಿಂದ ಕಾರಿನಲ್ಲಿ ವಾಪಸ್​ ಆಗಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಗುರೂಜಿಯಿಂದ ಜಾಗ್ರತೆ ಎನ್ನುವ ಆರ್ಶೀವಾದವನ್ನು ಚಂದ್ರಶೇಖರ್ ಪಡೆದಿದ್ದರು ಎಂಬುದು ತಿಳಿದುಬಂದಿದೆ.

ಚಂದ್ರಶೇಖರ್ ಹಾಗೂ ವಿನಯ್ ಗುರೂಜಿ
ಚಂದ್ರಶೇಖರ್ ಹಾಗೂ ವಿನಯ್ ಗುರೂಜಿ

ಚಿಕ್ಕಮಗಳೂರು: ನಾಪತ್ತೆ ಆಗುವ ಮೊದಲು ವಿನಯ್ ಗುರೂಜಿ ಆಶ್ರಮಕ್ಕೆ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಬಂದು ಹೋಗಿದ್ದು, ವಿನಯ್​ ಗುರೂಜಿಯೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ.

ಆಶ್ರಮದ ಸಿಬ್ಬಂದಿ ಸುಧಾಕರ್ ಅವರು ಮಾತನಾಡಿದರು

ಗೌರಿಗದ್ದೆ ಆಶ್ರಮಕ್ಕೆ ಚಂದ್ರಶೇಖರ್ ಭೇಟಿ : ತನ್ನ ಸ್ನೇಹಿತ ಕಿರಣ್​ನೊಂದಿಗೆ ಚಂದ್ರಶೇಖರ್ ಅವರು 30-10-2022ರ ಭಾನುವಾರ ರಾತ್ರಿ 9.45 ಕ್ಕೆ ಗೌರಿಗದ್ದೆ ಆಶ್ರಮಕ್ಕೆ ಬಂದು ವಿನಯ್ ಗುರೂಜಿ ಆರ್ಶೀವಾದ ಪಡೆದಿದ್ದಾರೆ. ರಾತ್ರಿ 10 ಗಂಟೆಗೆ ಕೊಪ್ಪ ಬಸ್ ನಿಲ್ದಾಣದಿಂದ ಕಾರಿನಲ್ಲಿ ವಾಪಸ್​​ ಆಗಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಗುರೂಜಿಯಿಂದ ಜಾಗೃತೆ ಎನ್ನುವ ಆರ್ಶೀವಾದವನ್ನು ಚಂದ್ರಶೇಖರ್ ಪಡೆದಿದ್ದರು.

ಈ ಬಗ್ಗೆ ಆಶ್ರಮದ ಸಿಬ್ಬಂದಿ ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿ.ಐ.ಪಿ ಎಂದು ಪರಿಗಣಿಸಲ್ಲ. ಚಂದ್ರು ಕೂಡ ಕಿರಣ್ ಜೊತೆ ಬಂದಿದ್ದರು ಎಂದರು.

ಚಂದ್ರು ಸಾವು ನೋವು ತಂದಿದೆ:ಅವರ ಸರಳತೆ ನೋಡಿ ಇಂದು ನಮಗೆ ತುಂಬಾ ಬೇಜಾರಾಗಿದೆ. ನಿನ್ನೆಯಿಂದ ಗುರುಗಳು ತುಂಬಾ ಬೇಜಾರಾಗಿದ್ದಾರೆ. ಆಶ್ರಮದಲ್ಲಿ ಚಂದ್ರು ಊಟ ಬಡಿಸುತ್ತಿದ್ದ, ತೆಂಗಿನಕಾಯಿ ಸುಲಿಯುತ್ತಿದ್ದ. ಇಂದು ಚಂದ್ರು ಸಾವು ನಮಗೆ ತುಂಬಾ ನೋವು ತಂದಿದೆ ಎಂದು ಹೇಳಿದರು.

ಓದಿ:ನಮಗೆ ದೇಶ ಮುಖ್ಯ, ಜಾತಿ ಅಲ್ಲ, ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ: ಶಾಸಕ ರೇಣುಕಾಚಾರ್ಯ

ABOUT THE AUTHOR

...view details