ಕರ್ನಾಟಕ

karnataka

ETV Bharat / state

ಕಾರ್ಯಕರ್ತರ ಪ್ರತಿಭಟನೆ: ವಿಜಯ ಸಂಕಲ್ಪಯಾತ್ರೆ ರದ್ದುಗೊಳಿಸಿ ಹೊರನಡೆದ ಬಿಎಸ್​ವೈ - ಕಾರ್ಯಕರ್ತರ ಪ್ರತಿಭಟನೆ

ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಚಿಕ್ಕಮಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ರದ್ದುಗೊಳಿಸಿ ತೆರಳಿದ ಘಟನೆ ನಡೆದಿದೆ.

bsy-cancels-vijaya-sankalpayatra-in-half
ಕಾರ್ಯಕರ್ತರ ಪ್ರತಿಭಟನೆ: ವಿಜಯ ಸಂಕಲ್ಪಯಾತ್ರೆಯನ್ನು ರದ್ದುಗೊಳಿಸಿ ಹೊರನಡೆದ ಬಿಎಸ್​ವೈ

By

Published : Mar 16, 2023, 8:56 PM IST

Updated : Mar 16, 2023, 10:03 PM IST

ಕಾರ್ಯಕರ್ತರ ಪ್ರತಿಭಟನೆ: ವಿಜಯ ಸಂಕಲ್ಪಯಾತ್ರೆ ರದ್ದುಗೊಳಿಸಿ ಹೊರನಡೆದ ಬಿಎಸ್​ವೈ

ಚಿಕ್ಕಮಗಳೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಚಿಕ್ಕಮಗಳೂರಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿತಯೂರಪ್ಪ ಯಾತ್ರೆಯನ್ನು ಅರ್ಧಕ್ಕೆ ರದ್ದುಗೊಳಿಸಿ ತೆರಳಿದ ಘಟನೆ ಇಂದು ನಡೆದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು‌ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ಅವರಿಗೆ ಟಿಕೆಟ್​ ನೀಡಬೇಡಿ ಎಂಬ ಘೋಷಣೆಗಳನ್ನು ಕೂಗಿ ರಸ್ತೆ ಅಡ್ಡಗಟ್ಟಿದ್ದರು.

ಕಾರ್ಯಕರ್ತರ ಮನವೊಲಿಸಲು ಉಪಸಭಾಪತಿ ಎಂ.ಕೆ ಪ್ರಾಣೇಶ್ ಲಾರಿ ಮೇಲೆರಿ ಪ್ರಯತ್ನಿಸಿದರಾದರೂ ಕಾರ್ಯಕರ್ತರ ಘೋಷಣೆ ನಿಲ್ಲಲಿಲ್ಲ. ಕಾರ್ಯಕರ್ತರು ಸಮಾಧಾನ ಆಗದ ಹಿನ್ನೆಲೆಯಲ್ಲಿ ಸಿಟ್ಟಾದ ಬಿ.ಎಸ್​ ಯಡಿಯೂರಪ್ಪ ಯಾತ್ರೆ ರದ್ದುಗೊಳಿಸಿ ಹೆಲಿಪ್ಯಾಡ್ ಕಡೆಗೆ ತೆರಳಿದರು. ಮೂಡಿಗೆರೆ ಬಸ್ ನಿಲ್ದಾಣದ ಸಮೀಪ ರಸ್ತೆಯಲ್ಲಿ ಈ ಘಟನೆ ನಡೆದಿದ್ದು , ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆ ಕೇಂದ್ರ ಸಚಿವ ಸದಾನಂದ ಗೌಡ ಸೇರಿ ಹಲವರು ಈ ಯಾತ್ರೆಯಲ್ಲಿ ಭಾಗವಹಿಸಲು ಚಿಕ್ಕಮಗಳೂರಿನ ಮೂಡಿಗೆರೆಗೆ ಆಗಮಿಸಿದ್ದರು.

ಗರಂ ಆದ ಸಿಟಿ ರವಿ: ಬಿಎಸ್​ ಯಡಿಯೂರಪ್ಪ ಸಿಟ್ಟಾಗಿ ಯಾತ್ರೆಯಿಂದ ಹೊರ ನಡೆದ ನಂತರ ಸಿ.ಟಿ. ರವಿ ಅವರು ಕಾರ್ಯಕರ್ತರಿಗೆ ‘‘ಮರ್ಯಾದೆ ಕಳೆಯುತ್ತಿದ್ದೀರಾ. ನೀವು ಮೊದಲೇ ಮಾತನಾಡಿಕೊಳ್ಳಬೇಕಿತ್ತು..?’’ ಎಂದು ಗರಂ ಆದರು.

ಇದನ್ನೂ ಓದಿ:ಕೋವಿಡ್​ ಪ್ರಕರಣಗಳು ಏರಿಕೆ: ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಆರೋಗ್ಯ ಕಾರ್ಯದರ್ಶಿ

ಯಾತ್ರೆ ಆರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಬಿ.ಎಸ್ ಯಡಿಯೂರಪ್ಪ, ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ರೀತಿ ಯಾರೂ ಹೇಳಿಕೆ ಕೊಡಬಾರದು, ಅದು ತಪ್ಪು. ಅವರನ್ನ ಕರೆಸಿ ಮಾತನಾಡುತ್ತೇನೆ, ಆ ರೀತಿ ಯಾರೂ ಮಾತನಾಡಬಾರದು, ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಮುಖ್ಯ ಎಂದಿದ್ದರು. ಇನ್ನು ಮೂಡಿಗೆರೆ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟದ ಬಗ್ಗೆ ಮಾತನಾಡಿದ್ದ ಬಿಎಸ್​ವೈ, ಗೆಲ್ಲುವ ಪಕ್ಷದಲ್ಲಿ ಅವೆಲ್ಲ ಸರ್ವೆ ಸಾಮಾನ್ಯ, ಎಲ್ಲ ಸರಿ ಮಾಡ್ತೀವಿ. ಟಿಕೆಟ್ ಯಾರಿಗೆ ಕೋಡಬೇಕು ಎಂಬುದನ್ನ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ರಾಜ್ಯದೆಲ್ಲೆಡೆ ವಿಜಯ ಸಂಕಲ್ಪ ಯಾತ್ರೆಗೆ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ. ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಎಂ.ಪಿ ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಆಕ್ರೋಶ: ಮೂಡಿಗೆರೆಯಲ್ಲಿ ಹಾಲಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರು ತಿರುಗಿ ಬಿದ್ದಿದ್ದು, ಶಾಸಕರು ಕಾರ್ಯಕರ್ತರ ಪರವಾಗಿ ಕೆಲಸ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಇವರು ಮುಂದೆ ಗೆದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗುತ್ತೆ. ಆದ್ದರಿಂದ ಎಂ‌.ಪಿ ಕುಮಾರಸ್ವಾಮಿ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್​ ನೀಡಿ. ನಮಗೆ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

ಇದನ್ನೂ ಓದಿ:ಬಿಎಸ್​​​​ವೈ- ಸೋಮಣ್ಣ ಮುನಿಸು ಶಮನಕ್ಕೆ ಮಾದಪ್ಪನ ಬೆಟ್ಟದಲ್ಲಿ ವೇದಿಕೆ ಸಿದ್ಧ!

Last Updated : Mar 16, 2023, 10:03 PM IST

ABOUT THE AUTHOR

...view details