ಕರ್ನಾಟಕ

karnataka

ETV Bharat / state

ಕಾಫಿನಾಡಿನ ಜನತೆಗೆ ಭಾವನಾತ್ಮಕ ಪತ್ರ ಬರೆದ ಸಿ ಟಿ ರವಿ - ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

1988ರಲ್ಲಿ ಆಟೋ ಚಂದ್ರಣ್ಣನವರು ನನಗೆ ಬಿಜೆಪಿ ಸದಸ್ಯನಾಗಲು ಆಹ್ವಾನಿಸಿ ಬಿಜೆಪಿ ಸದಸ್ಯನಾಗಿ ಮಾಡಿದರು. ಅಲ್ಲಿಂದ ಇಂದು ನಾನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗುವವರೆಗೆ ನನ್ನನ್ನು ಬೆಳೆಸಿದವರು ಇಂತಹ ಅನೇಕ ಚಂದ್ರಣ್ಣರು..

ct ravi write letter news
ಭಾವನಾತ್ಮಕ ಪತ್ರ ಬರೆದ ಸಿ.ಟಿ. ರವಿ

By

Published : Nov 27, 2020, 9:50 PM IST

ಚಿಕ್ಕಮಗಳೂರು :ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಿಲ್ಲೆಯ ಸಿ ಟಿ ರವಿ ಇಂದು ದೆಹಲಿಯಲ್ಲಿ ನೂತನ ಕಚೇರಿ ಪೂಜೆ ಮಾಡುವುದರ ಮೂಲಕ ಉದ್ಘಾಟನೆ ಮಾಡಿದ್ದಾರೆ.

ಕಚೇರಿ ಪೂಜೆಯಲ್ಲಿ ಸಿ ಟಿ ರವಿ

ಈ ವೇಳೆ ಸಿ ಟಿ ರವಿ ಕ್ಷೇತ್ರದ ಜನರಿಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಾಗರವಳ್ಳಿಯ ಸಾಮಾನ್ಯ ರೈತ ಕುಟುಂಬದ ಮಗನೊಬ್ಬ ಇವತ್ತು ದೇಶದ ರಾಜಧಾನಿ ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಂತಿದ್ದಾನೆ. ಕರ್ನಾಟಕದ ಹಳ್ಳಿಯಿಂದ ಆರಂಭವಾದ ರಾಜಕೀಯ ಯಾತ್ರೆ, ದಿಲ್ಲಿಯವರೆಗೂ ಬಂದು ನಿಂತಿದೆ.

ಭಾವನಾತ್ಮಕ ಪತ್ರ ಬರೆದ ಸಿ ಟಿ ರವಿ

1988ರಲ್ಲಿ ಆಟೋ ಚಂದ್ರಣ್ಣನವರು ನನಗೆ ಬಿಜೆಪಿ ಸದಸ್ಯನಾಗಲು ಆಹ್ವಾನಿಸಿ ಬಿಜೆಪಿ ಸದಸ್ಯನಾಗಿ ಮಾಡಿದರು. ಅಲ್ಲಿಂದ ಇಂದು ನಾನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗುವವರೆಗೆ ನನ್ನನ್ನು ಬೆಳೆಸಿದವರು ಇಂತಹ ಅನೇಕ ಚಂದ್ರಣ್ಣರು. ಪ್ರಚಾರ ಮುಗಿಸಿ ಹಸಿದು ಬಾಗಿಲ ಬಳಿ ಬಂದು ನಿಂತಾಗ ಅಕ್ಕರೆಯಿಂದ ಕೈ ತುತ್ತು ಕೊಟ್ಟರು.

ಖಾಲಿ ಜೇಬಿನಲ್ಲಿ ಹೋರಾಟಗಳನ್ನು ಪ್ರಾರಂಭಿಸಿದಾಗ ಖರ್ಚಿಗೆ ಹಣ ಕೊಟ್ಟರು. ನನ್ನ ತಪ್ಪುಗಳನ್ನು ತಿದ್ದಿ ಕಿವಿ ಹಿಂಡಿದರು. ರಾಜಕೀಯದ ಸರಿ-ತಪ್ಪುಗಳನ್ನು ಹೇಳಿಕೊಟ್ಟರು. ಹೀಗೆ 33 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಬೀದಿಗಳಲ್ಲಿ ಪಕ್ಷದ ಬ್ಯಾನರ್ ಕಟ್ಟುವ ಮೂಲಕ ಆರಂಭವಾದ ನನ್ನ ರಾಜಕೀಯ ಜೀವನ ಈವರೆಗೂ ಬಂದು ನಿಂತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ನನ್ನೂರು ಚಿಕ್ಕಮಗಳೂರಿನ ಜನತೆ.

ಕಚೇರಿ ಪೂಜೆಯಲ್ಲಿ ಸಿ ಟಿ ರವಿ

ಹೆತ್ತೊಡಲ ಮಗನಂತೆ ನನ್ನನ್ನು ಪೋಷಿಸಿ ಈ ಮಟ್ಟಕ್ಕೆ ಬೆಳೆಸಿ ನಿಲ್ಲಿಸಿದ್ದೀರಿ. ನಿಮ್ಮ ಪ್ರೀತಿ ಅಭಿಮಾನದ ಋಣ ದೊಡ್ಡದು. ಇವತ್ತು ದೆಹಲಿಯಲ್ಲಿ ಹೊಸ ರಾಜಕೀಯ ಯಾನವೊಂದು ಆರಂಭವಾಗತ್ತಿರುವ ಸಮಯದಲ್ಲಿ ಹಳೆಯ ನೆನಪಿನ ಹಾಯಿ ದೋಣಿಗಳು ನನ್ನ ಭಾವ ಕಡಲಿನಲ್ಲಿ ತೇಲಿ ಹೋಗುತ್ತಿದ್ದು, ಹೃದಯ ತುಂಬಿ ಬಂದಿದೆ.

ನಿಮಗೆ ನಾನು ಸದಾ ಆಭಾರಿ. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ. ಜೀವವಿರುವ ತನಕ ನಿಮ್ಮೆಲ್ಲರ ಮನೆ ಮಗನಂತೆ ಸೇವೆ ಮಾಡುವ ಭಾಗ್ಯ ನನ್ನದಾಗಿರಲಿ ಎಂದು ದೆಹಲಿಯಿಂದ ಕ್ಷೇತ್ರದ ಜನರಿಗೆ ಸಿ ಟಿ ರವಿ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಕಚೇರಿ ಪೂಜೆಯಲ್ಲಿ ಸಿ ಟಿ ರವಿ, ಆರ್‌ ಅಶೋಕ್​, ಲಕ್ಷ್ಮಣ ಸವದಿ

ಇದನ್ನೂ ಓದಿ:ಎನ್​ಡಿಎಗೆ ಮತ ಹಾಕುವಂತೆ ಕುಟುಂಬ ಸದಸ್ಯರ ಮನವೊಲಿಸಿ; ಬಿಹಾರಿಗಳಿಗೆ ಸಿಟಿ ರವಿ ಕರೆ

ABOUT THE AUTHOR

...view details