ಕರ್ನಾಟಕ

karnataka

ಅತ್ತ ಕೊರೊನಾಗೆ ತಾಯಿ ಬಲಿ, ಇತ್ತ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಗಳು!

By

Published : Jul 19, 2020, 12:49 AM IST

ನಾಲ್ಕು ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ 60 ವರ್ಷದ ವೃದ್ಧೆ ಕೊನೆಗೂ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ತಾಯಿಯ ಸಂಪರ್ಕದಿಂದ ಗರ್ಭಿಣಿಗೂ ಕೋವಿಡ್​ ಪಾಸಿಟಿವ್ ಬಂದಿತ್ತು. ಹೀಗಾಗಿ ಎರಡು ದಿನದ ಹಿಂದೆ ಚಿಕ್ಕಮಗಳೂರಿನ ಆಸ್ಪತ್ರೆಗೆ ಗರ್ಭಿಣಿ ದಾಖಲಾಗಿದ್ದರು. ಅತ್ತ ತನ್ನ ಹೆತ್ತಮ್ಮನ ಸಾವಿನ ಸುದ್ದಿಯನ್ನ ಕೇಳಿ ಕೆಲವೇ ಗಂಟೆಗಳಲ್ಲಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ವಿಧಿಯಾಟ ಎಂಥ ವಿಚಿತ್ರ
ವಿಧಿಯಾಟ ಎಂಥ ವಿಚಿತ್ರ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಗರ್ಭಿಣಿಗೆ ತಾಯಿಯನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂತೋಷ ಮತ್ತೊಂದೆಡೆ.

ಗರ್ಭಿಣಿಯ ತಾಯಿ ಶಿವಮೊಗ್ಗದ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇತ್ತ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಅವರ ಮಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಾಲ್ಕು ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ 60 ವರ್ಷದ ವೃದ್ಧೆ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ತಾಯಿಯ ಸಂಪರ್ಕದಿಂದ ಗರ್ಭಿಣಿಗೂ ಕೋವಿಡ್​ ಪಾಸಿಟಿವ್ ಬಂದಿತ್ತು. ಹೀಗಾಗಿ ಎರಡು ದಿನದ ಹಿಂದೆ ಚಿಕ್ಕಮಗಳೂರಿನ ಆಸ್ಪತ್ರೆಗೆ ಗರ್ಭಿಣಿ ದಾಖಲಾಗಿದ್ದರು. ಅತ್ತ ತನ್ನ ಹೆತ್ತಮ್ಮನ ಸಾವಿನ ಸುದ್ದಿಯನ್ನ ಕೇಳಿ ಕೆಲವೇ ಗಂಟೆಗಳಲ್ಲಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಕೊರೊನಾ ಸೋಂಕಿದ್ದರೂ ಕೂಡ ತೀವ್ರ ನಿಗಾವಹಿಸಿ ಚಿಕ್ಕಮಗಳೂರಿನ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದು, ಇಬ್ಬರ ಮೇಲೂ ನಿಗಾವಹಿಸಿದ್ದಾರೆ. ಈಗಾಗಲೇ ಮಹಿಳೆಗೆ ಸೋಂಕು ತಗುಲಿರುವ ಕಾರಣ ಮಗುವಿಗೆ ಹರಡದಂತೆ ಜಾಗರೂಕತೆ ವಹಿಸಲಾಗಿದೆ. ತನ್ನ ಹೆತ್ತಮ್ಮನೇ ಮತ್ತೆ ಹೆಣ್ಣು ಮಗುವಾಗಿ ಹುಟ್ಟಿ ಬಂದಿದ್ದಾಳೆ ಎಂದು ಮಹಿಳೆ ಭಾವಿಸಿದ್ದಾರೆ.

ABOUT THE AUTHOR

...view details