ಚಿಕ್ಕಮಗಳೂರು:ಜಿಲ್ಲೆಯಲ್ಲಿಹೆಚ್ಚಾಗಿ ಕಾಫಿ, ಮೆಣಸು, ಶ್ರೀಗಂಧ ಬೆಳೆಯಲಾಗುತ್ತಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಈ ಬೆಳೆಗಳು ವ್ಯಾಪಿಸಿಕೊಂಡಿವೆ. ವರ್ಷಕ್ಕೆ ಒಂದು ಬಾರಿ ಬರುವ ಈ ಬೆಳೆಯನ್ನು ಕಾಡು ಪ್ರಾಣಿಗಳು ಹಾಗೂ ಕಳ್ಳಕಾಕರಿಂದ ಉಳಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡಬೇಕಾಗಿದೆ. ಅದಕ್ಕಾಗಿ ರೈತರು ಬಂದೂಕುಗಳ ಮೊರೆ ಹೋಗುತ್ತಾರೆ. ಅವುಗಳನ್ನು ಕೇವಲ ಬೆದರಿಸಲು ಮಾತ್ರ ಬಳಕೆ ಮಾಡಲಾಗುತ್ತದೆ.
ಬಂದೂಕು ಪರವಾನಗಿ ಕುರಿತು ಮಾತನಾಡಿರುವ ಜಿಲ್ಲಾ ಎಸ್ಪಿ ಅಕ್ಷಯ್ ಮಚಿಂದ್ರ, ಸ್ವರಕ್ಷಣೆ, ಬೆಳೆಗಳ ರಕ್ಷಣೆ ಸೇರಿದಂತೆ ಇತರ ಕಾರ್ಯಗಳಿಗಾಗಿ 9 ಸಾವಿರ ಗನ್ಗಳನ್ನು ಪಡೆಯಲಾಗಿದೆ. ಹೊಸ ಕಾಯ್ದೆಯ ಪ್ರಕಾರ ಒಬ್ಬ ಎರಡೂ ಗನ್ಗಳನ್ನು ಹೊಂದುವಂತಿಲ್ಲ. ಹೀಗಾಗಿ ಪರವಾನಗಿ ನವೀಕರಣಕ್ಕೆ ಹೆಚ್ಚು ಅರ್ಜಿಗಳು ಬಂದಿವೆ ಎಂದರು.
ಇದನ್ನೂ ಓದಿ...ಜಲಮೂಲ ಸೇರುತ್ತಿರುವ ಕಾರ್ಖಾನೆಗಳ ತ್ಯಾಜ್ಯ ನೀರಿಗೆ ಇಲ್ಲ ಅಡೆತಡೆ
ಹೊಸದಾಗಿ ಗನ್ ಪಡೆಯಲು ಪರವಾನಗಿ ಕೇಳಲು ಬಂದರೆ ಮೊದಲಿಗೆ ಅವರ ಕುರಿತು ತನಿಖೆ ಮಾಡಲಾಗುತ್ತದೆ. ಒಟ್ಟು 300 ಅರ್ಜಿಗಳು ಬಾಕಿ ಇದ್ದು, ಲೈಸನ್ಸ್ ಪಡೆಯುವವರ ಕುರಿತು ಪೊಲೀಸ್, ಅರಣ್ಯ, ಕಂದಾಯ ಇಲಾಖೆಗಳು ಗನ್ ನೀಡುವ ಷರತ್ತುಗಳನ್ನು ಪರಿಶೀಲಿಸಲಾಗುತ್ತದೆ. ಗನ್ ಬೇಕು ಎಂದು ಕೇಳುತ್ತಿರುವವರಿಗೆ ಜಮೀನು ಇದೆಯೇ, ಕಾಡು ಪ್ರಾಣಿಗಳಿಂದ ಸಮಸ್ಯೆ ಆಗುತ್ತಿದೆಯೇ, ಸ್ವಯಂ ರಕ್ಷಣೆಗೆ ಕೇಳುತ್ತಿದ್ದಾರೆಯೇ? ಅವರ ಹಿನ್ನೆಲೆ ಏನು? ಹೀಗೆ ಹಲವು ವಿಷಯಗಳನ್ನು ಪರಿಶೀಲಿಸಿ ನಂತರ ಗನ್ ನೀಡಲು ಅನುಮತಿ ನೀಡುತ್ತೇವೆ ಎಂದು ವಿವರಿಸಿದರು.