ಕರ್ನಾಟಕ

karnataka

ETV Bharat / state

ಹೊಸ ವರ್ಷದ ಸಂಭ್ರಮ ಕೂಟದಲ್ಲಿ ಹರಿದ ನೆತ್ತರು; ಹಳೆ ದ್ವೇಷಕ್ಕೆ ಯುವಕ ಕೊಲೆ - etv bharat kannada

ನೂತನ ವರ್ಷದ ಹರ್ಷಾಚರಣೆಯಲ್ಲಿದ್ದ ಯುವಕನನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

young man killed
ಯುವಕ ಕೊಲೆ

By

Published : Jan 1, 2023, 2:16 PM IST

Updated : Jan 1, 2023, 2:31 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದ ಮಧ್ಯೆ ನೆತ್ತರು ಹರಿದಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಪಾರ್ಟಿ ಮಾಡುವಾಗ ಯುವಕನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಈ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಐಮರೆಡ್ಡಿ ಗ್ರಾಮದ ಸಮೀಪ ನಡೆದಿದೆ.

ದೊಡ್ಡಗಂಜೂರು ಗ್ರಾಮದ ನಿವಾಸಿ ನವೀನ್​ ರೆಡ್ಡಿ(28) ಕೊಲೆಯಾದ ಯುವಕ. ಹೊಸ ವರ್ಷ 2023ನ್ನು ಸ್ವಾಗತಿಸುವ ಸಂಭ್ರಮಾಚರಣೆಗೆಂದು ಐಮರೆಡ್ಡಿಹಳ್ಳಿ ಸಮೀಪದ ಮಂಜೂಳಮ್ಮ ಡಾಬಾ ಬಳಿ ಪಾರ್ಟಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನವೀನ್​ ರೆಡ್ಡಿ ಮತ್ತು ಐವರ ನಡುವೆ ಹಳೆ ದ್ವೇಷಕ್ಕೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ನವೀನ್‌ನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳಲ್ಲಿ ಮೂವರು ಗ್ರಾಮಾಂತರ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ತಪ್ಪಿಸಿಕೊಂಡ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ನವೀನ್​ ಶವವನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಹೊಸ ವರ್ಷದ ಸಂಭ್ರಮದಲ್ಲಿ ಶೋಕ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ದುರ್ಮರಣ

Last Updated : Jan 1, 2023, 2:31 PM IST

ABOUT THE AUTHOR

...view details