ಬಾಗೇಪಲ್ಲಿ: ಪಟ್ಟಣದ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಬೀದಿ ಬದಿ ತಳ್ಳುವ ಗಾಡಿಯ ಮೇಲೆ ಶೇಂಗಾ, ನೇರಳೆ ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ದರ್ಪ ತೋರಿದ್ದಾರೆಂದು ಆರೋಪಿಸಲಾಗಿದೆ. ವ್ಯಾಪಾರಸ್ಥೆ ಗಂಗರತ್ನಮ್ಮರವರ ಮೇಲೆ ಕೊರೊನಾ ಕೇಸ್ ಹಾಕುತ್ತೇನೆ ಎಂದು ಪೊಲೀಸ್ ಅಧಿಕಾರಿಯು ಅವಾಜ್ ಹಾಕಿದ್ದಾರೆ. ರಕ್ಷಣೆ ಕೊಡಬೇಕಾದವರೆ ದರ್ಪ ತೋರಿದ್ದಾರೆ ಎಂದು ಆರೋಪಿಸಿರುವ ಮಹಿಳೆ ಪೊಲೀಸ್ ಠಾಣೆ ಮುಂಭಾಗದಲ್ಲೇ ವ್ಯಾಪಾರ ನಡೆಸಿದ್ದಾರೆ.
ಬಾಗೇಪಲ್ಲಿ: ಪೊಲೀಸ್ ಅಧಿಕಾರಿ-ಬೀದಿ ಬದಿ ವ್ಯಾಪಾರಸ್ಥೆ ನಡುವೆ ವಾಕ್ಸಮರ - ಡಿವೈಎಫ್ಐನ ಮುಖಂಡ ಐವಾರಪಲ್ಲಿ ಹರೀಶ್
ವ್ಯಾಪಾರಸ್ಥೆ ಗಂಗರತ್ನಮ್ಮರವರ ಮೇಲೆ ಕೊರೊನಾ ಕೇಸ್ ಹಾಕುತ್ತೇನೆ ಎಂದು ಪೊಲೀಸ್ ಅಧಿಕಾರಿಯು ಅವಾಜ್ ಹಾಕಿದ್ದಾರೆ. ರಕ್ಷಣೆ ಕೊಡಬೇಕಾದವರೆ ದರ್ಪ ತೋರಿದ್ದಾರೆ ಎಂದು ಆರೋಪಿಸಿರುವ ಮಹಿಳೆ ಪೊಲೀಸ್ ಠಾಣೆ ಮುಂಭಾಗದಲ್ಲೇ ವ್ಯಾಪಾರ ನಡೆಸಿದ್ದಾರೆ.
ಪೊಲೀಸ್ ಅಧಿಕಾರಿ-ಬೀದಿ ಬದಿ ವ್ಯಾಪಾರಸ್ಥೆ ನಡುವೆ ವಾಕ್ಸಮರ
ಓದಿ: ಕುಸ್ತಿ-ಕಲಿಗಳ ನಾಡು ದಾವಣಗೆರೆಗೆ ಈಗ ಖೇಲೋ ಇಂಡಿಯಾದ ಗರಿ!
"ಬಾಗೇಪಲ್ಲಿ ತಾಲೂಕಿನಲ್ಲಿ ಸಾಮಾನ್ಯ ಜನರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯ ಎಂಬಂತೆ ಆಡಳಿತ ವೈಖರಿ ಇದೆ. ಅದೇ ರೀತಿಯಲ್ಲಿ ಪೊಲೀಸರ ವರ್ತನೆಯೂ ಬಡವರನ್ನು ಹೆದರಿಸಿ, ಬೆದರಿಸುತ್ತಿದ್ದಾರೆ. ಆದರೆ ಶ್ರೀಮಂತರು, ರಾಜಕೀಯ ಪ್ರಬಲರ ಅನ್ಯಾಯಗಳನ್ನು ಪ್ರಶ್ನೆ ಮಾಡುವ ಗೋಜಿಗೂ ಹೋಗುವುದಿಲ್ಲ. ಬಡವರ ಮೇಲೆ ದರ್ಪ ತೋರುವುದನ್ನು ಬಿಟ್ಟು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳಬೇಕು." ಎಂದು ಡಿವೈಎಫ್ಐ ಮುಖಂಡ ಐವಾರಪಲ್ಲಿ ಹರೀಶ್ ತಿಳಿಸಿದರು.