ಚಿಂತಾಮಣಿ(ಚಿಕ್ಕಬಳ್ಳಾಪುರ): ಜಿಲ್ಲೆಗೆ ಕೋಟ್ಯಾಂತರ ರೂ. ವಹಿವಾಟು ತಂದು ಕೊಡುತ್ತಿರುವ ಚಿಂತಾಮಣಿ ನಗರದಲ್ಲಿ ದಿನೆ ದಿನೇ ಗಾಂಜಾ ಹಾಗೂ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ತಮಗೆ ಭದ್ರತೆಯಿಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಖಾಲಿ ಮನೆಗಳಿಗೆ ನುಗ್ಗಿ ಕುಡುಕರ ಪುಂಡಾಟ.. ಪ್ರತಿನಿತ್ಯ ಸಾರ್ವಜನಿಕರಿಗೆ ತೊಂದರೆ
ಸದ್ಯ ಖಾಲಿ ಮನೆಗಳನ್ನೇ ತಮ್ಮ ಅಡ್ಡವನ್ನಾಗಿಸಿಕೊಂಡು ಗಾಂಜಾ, ಮದ್ಯ ಸೇರಿದಂತೆ ಜೂಜಿನಲ್ಲಿ ತೊಡಗಿಕೊಂಡಿರುವ ಪುಂಡರು ಸ್ಥಳೀಯರಿಗೆ ನೆಮ್ಮದಿಯಿಲ್ಲದಂತೆ ಮಾಡುತ್ತಿದ್ದಾರೆ.
ನಗರದ ನಾಗನಾಥೇಶ್ವರ ದೇವಸ್ಥಾನದ ವಾರ್ಡ್‌ನಲ್ಲಿ ಪ್ರತಿನಿತ್ಯವು ಗಾಂಜಾ, ಮದ್ಯ ಸೇವನೆ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದ್ದು ಸ್ಥಳೀಯರು ಮನೆಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಇತ್ತಿಚ್ಚೆಗಷ್ಟೇ ನಗರದ ಮನೆಯೊಂದರ ಬಾಗಿಲನ್ನು ಮುರಿದು ಮನೆಯಲ್ಲಿದ್ದ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಅಲ್ಲದೇ ರಾತ್ರಿ ವೇಳೆ ಮೊಬೈಲ್ ಬಳಸಿ ಜೂಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸದ್ಯ ಖಾಲಿ ಮನೆಗಳನ್ನೇ ತಮ್ಮ ಅಡ್ಡವನ್ನಾಗಿಸಿಕೊಂಡು ಗಾಂಜಾ, ಮದ್ಯ ಸೇರಿದಂತೆ ಜೂಜುನಲ್ಲಿ ತೊಡಗಿಕೊಂಡಿರುವ ಪುಂಡರು ಸ್ಥಳೀಯರಿಗೆ ನೆಮ್ಮದಿಯಿಲ್ಲದಂತೆ ಮಾಡುತ್ತಿದ್ದಾರೆ. ಈ ಕುರಿತು ಸ್ಥಳೀಯರು ಸಾಕಷ್ಡು ಬಾರಿ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಈಟಿವಿ ಭಾರತದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.