ಕರ್ನಾಟಕ

karnataka

ETV Bharat / state

ತಾರತಮ್ಯ ಮಾಡದೆ ಭಾರತೀಯರು ಒಂದೇ ಎನ್ನುವುದು ಬಿಜೆಪಿ ಸರ್ಕಾರ ಮಾತ್ರ: ಸಚಿವ ಸುಧಾಕರ್​ - ಚಿಕ್ಕಬಳ್ಳಾಪುರ ಸುದ್ದಿ ಬಿಜೆಪಿ ಸರ್ಕಾರ

ತಾರತಮ್ಯ ಮಾಡದೆ ಭಾರತೀಯರು ಒಂದೇ ಎನ್ನುವುದು ಬಿಜೆಪಿ ಸರ್ಕಾರ ಮಾತ್ರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

minister dr.k sudakar
ಸಚಿವ ಡಾ.ಕೆ ಸುಧಾಕರ್

By

Published : Feb 29, 2020, 6:35 PM IST

ಚಿಕ್ಕಬಳ್ಳಾಪುರ: ತಾರತಮ್ಯ ಮಾಡದೆ ಭಾರತೀಯರು ಒಂದೇ ಎನ್ನುವುದು ಬಿಜೆಪಿ ಸರ್ಕಾರ ಮಾತ್ರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್

ಮಾಧ್ಯಮದವರ ಜೊತೆ ಮಾತನಾಡಿದ ಅವರು, ತಾರತಮ್ಯ ಮಾಡದೆ ಭಾರತೀಯರೆಲ್ಲ ಒಂದೇ ಎನ್ನುವುದು ನಮ್ಮ ಸರ್ಕಾರ ಮಾತ್ರ ಎಂದರು. ದೆಹಲಿ ಪ್ರಕರಣ ಕುರಿತಾಗಿ ಮಾತನಾಡಿ, ಇದು ನೂರಾರು ಜನರನ್ನ ಬಲಿ ಪಡೆಯಲು ವಿರೋಧ ಪಕ್ಷಗಳು ಮಾಡಿದ ಷಡ್ಯಂತ್ರ. ವಿರೋಧ ಪಕ್ಷಗಳು ಮತ್ತು ಕೆಲವು ಪಕ್ಷಗಳು ಅಶಾಂತಿ ಮೂಡಿಸಿ ಹಿಂಸೆ ನಡೆಸಿವೆ ಎಂದು ಆರೋಪಿಸಿದರು.

ಇನ್ನು ಅಮೆರಿಕ ಅಧ್ಯಕ್ಷರ ಮುಂದೆ ವಿಶ್ವಮಟ್ಟದಲ್ಲಿ ಭಾರತದ ಘನತೆ ಗೌರವ ಮಣ್ಣುಪಾಲು ಮಾಡಲು ನಡೆಸಿದ ದುರುದ್ದೇಶ ಕೃತ್ಯ ಇದಾಗಿದ್ದು, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದರು. ಸದ್ಯ ಕೇಂದ್ರ ಸರ್ಕಾರ ಎಲ್ಲವನ್ನೂ ಹತೋಟಿಗೆ ತಂದಿದೆ. ಕಳೆದ 70 ವರ್ಷದಲ್ಲಿ ಎರಡನೇ ಬಾರಿ ಕೋಮು ಗಲಭೆ ಸೃಷ್ಟಿ ಮಾಡಲಾಗಿದೆ. ಬಹಳ ದೊಡ್ಡ ಮಟ್ಟದಲ್ಲಿ ಹಾನಿ ಮಾಡಲು ಯೋಜನೆ ರೂಪಿಸಿದ್ದರು. ಇದನ್ನು ಕೇಂದ್ರ ಸರ್ಕಾರ ಹತೋಟಿಗೆ ತಂದಿದೆ ಎಂದರು.

ಇನ್ನು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಮಾತನಾಡುವಾಗ ಮನಸ್ಸೋಇಚ್ಛೆ ಮಾತನಾಡಬಾರದು. ನಾಗರಿಕ ಸಮಾಜ ಕಟ್ಟುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ABOUT THE AUTHOR

...view details