ಕರ್ನಾಟಕ

karnataka

ETV Bharat / state

ಮಕ್ಕಳಿಗೆ ಮನಬಂದಂತೆ ಥಳಿಸಿದ ಶಿಕ್ಷಕಿ.. ಪರೀಕ್ಷೆ ಬರೆಯದೆ ವಿದ್ಯಾರ್ಥಿಗಳು ಆಸ್ಪತ್ರೆಗೆ ಅಡ್ಮಿಟ್ - ಪರೀಕ್ಷೆ

ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಾಲೆಗೆ ಹೋದಾಗ ಯಾಕೆ ಒಂದು ತಿಂಗಳಿಂದ ಶಾಲೆಗೆ ಬರಲಿಲ್ಲ. ಶಾಲೆಗೆ ಬರಬೇಡಿ ಹೊರಹೋಗಿಯೆಂದು ನಿಂದಿಸಿ ಮಾತನಾಡಿರುವ ಶಿಕ್ಷಕಿ,  ಮನೆಯಲ್ಲಿ ಇದ್ದುಬಿಡಿ ಎಂದು ಮನಬಂದಂತೆ ಥಳಿಸಿ ಶಾಲೆಯಿಂದ ಹೊರ ಹಾಕಿರುವ ಆರೋಪ ಕೇಳಿ ಬಂದಿದೆ.

ಶಾಲಾ ಶಿಕ್ಷಕಿ

By

Published : Mar 30, 2019, 9:50 AM IST

ಚಿಕ್ಕಬಳ್ಳಾಪುರ : ಪರೀಕ್ಷೆ ಬರೆಯಬೇಕಾದ ಶಾಲಾ ಮಕ್ಕಳನ್ನು ಶಾಲಾ ಶಿಕ್ಷಕಿ ಮನಬಂದಂತೆ ಥಳಿಸಿರುವ ಆರೋಪ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೈರಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಕೇಳಿ ಬಂದಿದೆ.

ಪರೀಕ್ಷೆ ಬರೆಯಲು ಶಾಲೆಗೆ ಬಂದ 3 ಮಕ್ಕಳನ್ನು ಶಾಲಾ ಶಿಕ್ಷಕಿ ಗಾಯವಾಗುವಂತೆ ಹೊಡೆದಿರುವುದರಿಂದ ಪರೀಕ್ಷೆಯನ್ನು ಸಹ ಬರೆಯದೆ ಮಕ್ಕಳು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಾಲೆಗೆ ಹೋದಾಗ ಯಾಕೆ ಒಂದು ತಿಂಗಳಿಂದ ಶಾಲೆಗೆ ಬರಲಿಲ್ಲ. ಶಾಲೆಗೆ ಬರಬೇಡಿ ಹೊರಹೋಗಿಯೆಂದು ನಿಂದಿಸಿ ಮಾತನಾಡಿದ್ದ ಶಿಕ್ಷಕಿ, ಮನೆಯಲ್ಲಿ ಇದ್ದುಬಿಡಿ ಎಂದು ಮನಬಂದಂತೆ ಥಳಿಸಿ ಶಾಲೆಯಿಂದ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಬಿಸಿಊಟ ಬಡಿಸುವಾಗ ಶಾಲಾ ಬಾಲಕನ ಮೇಲೆ ಮುಖ್ಯ ಅಡಿಗೆ ಸಿಬ್ಬಂದಿ ಕೋಪಗೊಂಡು ಉದ್ದೇಶ ಪೂರ್ವಕವಾಗಿ ಬಿಸಿ ಸಾಂಬಾರನ್ನು ಚೆಲ್ಲಿದ್ದಾರೆ. ಭುಜದ ಮೇಲೆ ಬಿಸಿ ಸಾಂಬಾರ್​ ಬಿದ್ದು ಬೊಬ್ಬೆ ಬರುವಂತ ರೀತಿಯಲ್ಲಿ ಗಾಯವಾಗಿತ್ತು, ಹಾಗಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಪರೀಕ್ಷೆ ಸಮಯವೆಂದು ಪರೀಕ್ಷೆ ಬರೆಯಲು ಶಾಲೆಗೆ ಹೋದಾಗ ಮನ ಬಂದಂತೆ ಥಳಿಸಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮಕ್ಕಳನ್ನು ಮನಬಂದಂತೆ ಥಳಿಸಿರುವ ಶಾಲಾ ಶಿಕ್ಷಕಿ

ಪೋಷಕ ನಾರಾಯಣಸ್ವಾಮಿ ಮಾತನಾಡಿ, ಈ ಹಿಂದೆಯೂ ಅಡಿಗೆ ಸಿಬ್ಬಂದಿ ನಮ್ಮ ಮಗನ ಮೈಮೇಲೆ ಸಾಂಬಾರು ಚೆಲ್ಲಿ ತೊಂದರೆ ನೀಡಿದ್ದರು. ಈಗ ಶಾಲಾ ಶಿಕ್ಷಕಿ ಮಕ್ಕಳಿಗೆ ಮಾನಸಿಕವಾಗಿ ಹಿಂಸೆ ನೀಡಿ ಗುರುವಾರ ಮಧ್ಯಾಹ್ನ ಬೆತ್ತದಿಂದ ಹೊಡೆದು ಕಳಿಸಿದ್ದಾರೆ. ಅವರ ವಿರುದ್ದ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು. ಈ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ 5 ಸಾರಿ ದೂರು ಕೊಟ್ಟರೂ ಸೂಕ್ತ ಕ್ರಮಕೈಗೊಂಡಿಲ್ಲ. ಜೊತೆಗೆ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಈವರೆಗೂ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲ್ಲಿಗೆ ಬಂದು ಮಕ್ಕಳ ಯೋಗಕ್ಷೇಮ ವಿಚಾರಿಸಿಲ್ಲ. ನಮ್ಮ ಮಕ್ಕಳ ವಿದ್ಯಾಭ್ಯಾಸ ಹಾಳಾಗಲು ಸಂಬಂದಪಟ್ಟ ನಿರ್ಲಕ್ಷಿತ ಅಧಿಕಾರಿಗಳು ಹಾಗೂ ದೂರು ನೀಡಿದಾಗ ವಿಳಂಬ ಮಾಡುತ್ತಿರುವ ಪೊಲೀಸ್ ಅಧಿಕಾಗಳೇ ಕಾರಣರಾಗಿದ್ದಾರೆ. ಹಾಗಾಗಿ ತಮಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.

ABOUT THE AUTHOR

...view details