ಚಿಕ್ಕಬಳ್ಳಾಪುರ : ಸೈಯದ್ ಜಮೀರ್ ಪಾಷ ಎಂಬ ಪಾರಿಯೊಬ್ಬನನ್ನು ಮುಸುಕುಧಾರಿಗಳು ಅಡ್ಡಗಟ್ಟಿ ಲಕ್ಷಾಂತರ ರೂಪಾಯಿಯನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ವ್ಯಾಪಾರಿಯನ್ನು ಅಡ್ಡಗಟ್ಟಿ ₹3.10 ಲಕ್ಷ ದೋಚಿದ ದರೋಡೆಕೋರರು.. - ವಾಣಿಜ್ಯ ನಗರಿ
ಪಾರಿಯೊಬ್ಬನನ್ನು ಮುಸುಕುಧಾರಿಗಳು ಅಡ್ಡಗಟ್ಟಿ ಲಕ್ಷಾಂತರ ರೂಪಾಯಿಯನ್ನು ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ವ್ಯಾಪಾರಿಯನ್ನು ಅಡ್ಡಗಟ್ಟಿ 3.10 ಲಕ್ಷ ದೋಚಿದ ದರೋಡೆಕೋರರು
ದನಗಳ ಸಂತೆಯಲ್ಲಿ ಭಾನುವಾರ ಜಾನುವಾರುಗಳ ಖರೀದಿಗೆಂದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ನಾಲ್ವರು ಮುಸುಕುಧಾರಿಗಳು ಹಲ್ಲೆ ಮಾಡಿ 3.10 ಲಕ್ಷ ರೂಪಾಯಿಯನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಚಿನ್ನಸಂದ್ರ ಗ್ರಾಮದ ಸೈಯದ್ ಜಮೀರ್ ಪಾಷ ಸದ್ಯ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.