ಬಾಗೇಪಲ್ಲಿ: ಮಹಿಳೆಯೊಬ್ಬರು ಸಾಕಿದ್ದ ಹಂದಿಗಳಿಗೆ ಕಿಡಿಗೇಡಿಗಳು ವಿಷ ಇಟ್ಟು ಕೊಂದಿರುವ ಘಟನೆ, ಬಾಗೇಪಲ್ಲಿ ತಾಲೂಕು ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮಾಕಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಗೇಪಲ್ಲಿ: ಕಿಡಿಗೇಡಿಗಳಿಂದ ಹಂದಿಗಳಿಗೆ ವಿಷ ಉಣಿಸಿ ಹತ್ಯೆ - bagepalli Poison to pigs
ಕಳೆದ ಬುಧವಾರ ಯಾರೋ ಕಿಡಿಗೇಡಿಗಳು ತಮ್ಮ ಹಳೇ ವೈಷಮ್ಯದಿಂದ ಎಗ್‌ರೈಸ್‌ನಲ್ಲಿ ʼಟೀಮಿಟʼ ಕ್ರಿಮಿನಾಶಕವನ್ನು ಬೆರೆಸಿ ಆರು ಹಂದಿಗಳನ್ನು ಹತ್ಯೆಮಾಡಿದ್ದಾರೆ ಎನ್ನಲಾಗಿದೆ.
ಹಂದಿಗಳಿಗೆ ವಿಷ
ತಿಮಾಕಲಪಲ್ಲಿ ಗ್ರಾಮದ ನಾರಾಯಣಪ್ಪ ಎಂಬುವರ ಪತ್ನಿ ರತ್ನಮ್ಮ, ತಮ್ಮ ಮನೆತನದ ಕಸುಬಾಗಿರುವ ಹಂದಿ ಸಾಕಾಣಿಕೆಯನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಆದರೆ, ಇದು ಹಲವರಿಗೆ ಅಸಹನೆ ಉಂಟುಮಾಡಿತ್ತು. ಈ ಕಾರಣಕ್ಕೆ ಕಳೆದ ಬುಧವಾರ ಯಾರೋ ಕಿಡಿಗೇಡಿಗಳು ತಮ್ಮ ಹಳೇ ವೈಷಮ್ಯದಿಂದ ಎಗ್‌ರೈಸ್‌ನಲ್ಲಿ ʼಟೀಮಿಟʼ ಕ್ರಿಮಿನಾಶಕವನ್ನು ಬೆರೆಸಿ ಆರು ಹಂದಿಗಳನ್ನು ಹತ್ಯೆಮಾಡಿದ್ದಾರೆ ಎನ್ನಲಾಗಿದೆ.
ಹಂದಿಗಳ ಸಾವಿನಿಂದ ಸುಮಾರು 80,000 ರೂ. ನಷ್ಟವಾಗಿದೆ ಎಂದು ರತ್ನಮ್ಮ ಆರೋಪಿಸಿ, ಬಾಗೇಪಲ್ಲಿ ತಾಲೂಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.