ಚಿಕ್ಕಬಳ್ಳಾಪುರ :ಜಿಲ್ಲೆಯಲ್ಲೇ ಅತಿ ಹೆಚ್ಚು ಸೋಂಕಿತರಿರುವ ತಾಲೂಕಿನಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳದೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ ಸುಧಾಕರ್ ಗುದ್ದಲಿ ಪೂಜೆ ನೆರವೇರಿಸಿದ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ.
ಸಾಮಾಜಿಕ ಅಂತರ ಮರೆತು ಗುದ್ದಲಿ ಪೂಜೆ ನಡೆಸಿದ ಹಾಲಿ-ಮಾಜಿ ಸಚಿವರು - Minister incharge Dr K Sudhakar
ರಾಜಕೀಯ ಬದ್ಧ ವೈರಿಗಳಾದ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಹಾಗೂ ಡಾ. ಸುಧಾಕರ್ ಇಬ್ಬರು ಜೊತೆಯಲ್ಲೇ ಗುದ್ದಲಿ ಪೂಜೆ ನೆರೆವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು ವಿಶೇಷ..
ಸಚಿವರಾದ ನಂತರ ಮೊದಲ ಬಾರಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಗೌರಿಬಿದನೂರಿಗೆ ಆಗಮಿಸಿದ್ದ ಸಚಿವರನ್ನು ನೂರಾರು ಕಾರ್ಯಕರ್ತರು ಸಮಾಜಿಕ ಅಂತರ ಮರೆತು ಬರಮಾಡಿಕೊಂಡರು. ರಾಜಕೀಯ ಬದ್ಧ ವೈರಿಗಳಾದ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಹಾಗೂ ಡಾ. ಸುಧಾಕರ್ ಇಬ್ಬರು ಜೊತೆಯಲ್ಲೇ ಗುದ್ದಲಿ ಪೂಜೆ ನೆರೆವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು ವಿಶೇಷವಾಗಿತ್ತು.
ಗೌರಿಬಿದನೂರು ತಾಲೂಕಿನಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿರುವುದರ ಜೊತೆಗೆ ಜಿಲ್ಲೆಯಲ್ಲೇ ಅತಿ ಹೆಚ್ಚು ಸೋಂಕಿತರಿರುವ ತಾಲೂಕಾಗಿಯೂ ಗುರುತಿಸಿಕೊಂಡಿದೆ. ಆದರೆ, ಶಾಸಕ ಹಾಗೂ ಸಚಿವರ ಮಾತಿಗೆ ಬೆಲೆಕೊಡದ ತಾಲೂಕಿನ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.