ಚಿಂತಾಮಣಿ:ತಾಲೂಕಿನ ಕಸಬಾ ಹೋಬಳಿ ನಾಯಂದ್ರಹಳ್ಳಿ ಶ್ರೀರಾಮಪುರ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪರಿಶಿಷ್ಟ ಜಾತಿಯ ಮಹಿಳೆಯನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದರು.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ಸಿ ಮಹಿಳೆ ಆಯ್ಕೆ ಮಾಡುವಂತೆ ಮನವಿ - Madiga Dandora Reservation Committee
ಕಸಬಾ ಹೋಬಳಿ ನಾಯಂದ್ರಹಳ್ಳಿ ಶ್ರೀರಾಮಪುರ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪರಿಶಿಷ್ಟ ಜಾತಿಯ ಮಹಿಳೆಯನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಕಸಬಾ ಹೋಬಳಿ ನಾಯಂದ್ರಹಳ್ಳಿ ಶ್ರೀರಾಮಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಜನಾಂಗದ ಸುಮಾರು 30 ಮನೆಗಳಿದ್ದು, ಬೇರೆ ಯಾವುದೇ ಜಾತಿ, ಜನಾಂಗದ ಜನರು ವಾಸವಿಲ್ಲ. ಈ ಹಿಂದೆ ಗ್ರಾಮಕ್ಕೆ ಮಿನಿ ಅಂಗನವಾಡಿ ಮಂಜೂರಾಗಿದೆ. ನಮ್ಮ ಜನಾಂಗದ ಅಮೃತಾ ಎಂಬುವರು ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರಣಾಂತರಗಳಿಂದ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಸದ್ಯ ಈ ಮಿನಿ ಅಂಗನವಾಡಿ ಕೆಲಸ ಖಾಲಿ ಇದ್ದು, ನಮ್ಮ ಜನಾಂಗದವರನ್ನು ಕೂಡಲೇ ಆಯ್ಕೆ ಮಾಡಿ ಕಾಯಂಗೊಳಿಸಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.