ಕರ್ನಾಟಕ

karnataka

ETV Bharat / state

ನಟ ಸುದೀಪ್​ರನ್ನು ಸಾಕಷ್ಟು ಬಾರಿ ಸಂಪರ್ಕಿಸಿದ್ದೆ, ಸಿಗಲಿಲ್ಲ.. ಸಚಿವ ಡಾ. ಸುಧಾಕರ್

ಇಂದು ಉಡುಪಿಯಲ್ಲಿ 121 ಹಾಗೂ ಕಲಬುರ್ಗಿಯಲ್ಲಿ 69 ಪ್ರಕರಣ ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ಬಂದವರು ನಮ್ಮ ರಾಜ್ಯದವರಾಗಿದ್ದು ಅವರನ್ನು ಬರಮಾಡಿಕೊಳ್ಳುವ ಅನಿವಾರ್ಯತೆ ಇತ್ತು. ಅಲ್ಲಿನ ಸರ್ಕಾರ ಅವರನ್ನು ಇಟ್ಟುಕೊಳ್ಳುವ ನಿಲುವು ಇರಲಿಲ್ಲ.

ಸಚಿವ ಸುಧಾಕರ್
ಸಚಿವ ಸುಧಾಕರ್

By

Published : Jun 6, 2020, 9:25 PM IST

ಚಿಕ್ಕಬಳ್ಳಾಪುರ( ಚಿಂತಾಮಣಿ):ಬದಲಾಗು ನೀನು ಎಂಬ ವಿಶೇಷ ದೃಶ್ಯ ರೂಪಕದ ಅಭಿಯಾನದಲ್ಲಿ ಸಾಕಷ್ಟು ಬಾರಿ ನಟ ಸುದೀಪ್​ರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ, ಅವರು ಸಂಪರ್ಕಕ್ಕೆ ಸಿಗದ ಕಾರಣ ಉಳಿದ ಎಲ್ಲಾ ತಾರೆಯರಿಂದ ದೃಶ್ಯರೂಪಕವನ್ನು ಮಾಡಲಾಯಿತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಸ್ಪಷ್ಟಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಯಾವುದೇ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಶೇ.90%ರಷ್ಟು ಮಹಾರಾಷ್ಟ್ರದಿಂದ ಬಂದವರದ್ದಾಗಿದ್ದಾರೆ. ಉಡುಪಿ,ಕಲುಬುರ್ಗಿ ಸೇರಿ ಕೆಲವು ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ನಂಟಿನಿಂದ ಪ್ರಕರಣ ಹೆಚ್ಚಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲ ದಿನಗಳ ನಂತರ ಕ್ವಾರಂಟೈನ್ ಅವಧಿ ಮುಗಿಯಲಿದೆ. ನಂತರ ಸೋಂಕಿತರ ಸಂಖ್ಯೆ ಸಂಪೂರ್ಣ ಕುಸಿಯಲಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ. ಸುಧಾಕರ್..​

ಇಂದು ಉಡುಪಿಯಲ್ಲಿ 121 ಹಾಗೂ ಕಲಬುರ್ಗಿಯಲ್ಲಿ 69 ಪ್ರಕರಣ ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ಬಂದವರು ನಮ್ಮ ರಾಜ್ಯದವರಾಗಿದ್ದು ಅವರನ್ನು ಬರಮಾಡಿಕೊಳ್ಳುವ ಅನಿವಾರ್ಯತೆ ಇತ್ತು. ಅಲ್ಲಿನ ಸರ್ಕಾರ ಅವರನ್ನು ಇಟ್ಟುಕೊಳ್ಳುವ ನಿಲುವು ಇರಲಿಲ್ಲ. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ನಮ್ಮ ರಾಜ್ಯಕ್ಕೆ ಬರಮಾಡಿಕೊಳ್ಳಲಾಯಿತು.

ಬದಲಾಗು ನೀನು ಎಂಬ ಕೊರೊನಾ ಜಾಗೃತಿ ಗೀತೆಯಲ್ಲಿ‌ ಕಿಚ್ಚ ಸುದೀಪ್​ರನ್ನು ಸಾಕಷ್ಟು ಬಾರಿ ಸಂಪರ್ಕಿಸಲು ಪ್ರಯತ್ನಿಸಿದ್ದೇನೆ. ಆದರೆ, ನನ್ನ ಸಂಪರ್ಕಕ್ಕೆ ಅವರು ಸಿಗಲಿಲ್ಲ. ಉಳಿದೆಲ್ಲಾ ತಾರೆಯರು ಸಂಪರ್ಕಕ್ಕೆ ಸಿಕ್ಕರು, ಬಳಿಕ ಅವರೇ ಆಸಕ್ತಿಯಿಂದ ಭಾಗಿಯಾಗಿದ್ದರು. ಅವರಿಗೆಲ್ಲಾ ಸರ್ಕಾರದಿಂದ ಹಾಗೂ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನಾನು ಹೋಂ ಕ್ವಾರಂಟೈನ್​ನಲ್ಲಿದ್ದ ವೇಳೆ ತಾರೆಯರ ದೃಶ್ಯ ರೂಪಕದ ಆಲೋಚನೆ ಬಂದಿತ್ತು. ಈ ಮೂಲಕ ರಾಜ್ಯದ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಮಾಡಲಾಯಿತು ಎಂದರು.

ABOUT THE AUTHOR

...view details