ಕರ್ನಾಟಕ

karnataka

ETV Bharat / state

ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡೋದಿಲ್ಲ: ಬಚ್ಚೇಗೌಡ

ಎರಡು ಬಾರಿ ವೀರಪ್ಪ‌ಮೊಯ್ಲಿ ಗೆಲ್ಲಿಸಿದ್ದು ಸಾಕು , ಈ ಬಾರಿ ಬಚ್ಚೇಗೌಡರನ್ನು ಗೆಲ್ಲಿಸಬೇಕೆನ್ನುವ ತೀರ್ಮಾನಕ್ಕೆ ಜನರು ಬಂದಿದ್ದು. ನಾನು ಖಂಡಿತ ಈ ಬಾರಿ ಗೆಲ್ಲುತ್ತೇನೆ ಎಂದರು.

By

Published : Mar 21, 2019, 2:05 AM IST

bacchegowda

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ಬಗ್ಗೆ ಮತನಾಡುವುದಿಲ್ಲವೆಂದು ದೇವೇಗೌಡರ ರಾಜಕೀಯ ಎದುರಾಳಿ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಚ್ಚೇಗೌಡ ಹೇಳಿದರು.

ತೂಬಗೆರೆಯ ಜಾತ್ರೆಗೆ ಆಗಮಿಸಿದ್ದ ಅವರು ಮಾಧ್ಯಮಗಳ ಜತೆ ಮಾತನಾಡಿ, ಕಳೆದ ಬಾರಿ ತ್ರಿಕೋನ ಸ್ಪರ್ಧೆ ಇದ್ದ ಹಿನ್ನೆಲೆ ಕಡಿಮೆ ಅಂತರದಲ್ಲಿ ಸೋಲಬೇಕಾಯ್ತು. ಈ ಬಾರಿ ನೇರಾನೇರ ಸ್ಪರ್ಧೆ ಇದ್ದು, ಗೆಲ್ಲುವ ವಿಶ್ವಾಸವಿದೆ. ರಾಷ್ಟ್ರ‌ದಲ್ಲಿ ಮೋದಿ ಒಲವು ಇರುವುದರಿಂದ ಗೆಲುವು ಸುಲಭ‌ವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

bacchegowda

ಸ್ವಾಮೀಜಿಯವರ ಅಶೀರ್ವಾದ ಪಡೆಯಲು ಆದಿಚುಂಚನಗಿರಿ ಮಠಕ್ಕೆ ಹೋಗಿದ್ದೆನೆಯೇ ಹೊರತು ಓಟ್ ಕೋಡಿ ಎಂದು ನಾವು ಯಾವತ್ತೂ ಹೋಗಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೀರಪ್ಪಮೊಯ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆ‌ಯಾಗಿದ್ದಾರೆ. ಬಯಲು ಸೀಮೆಯ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಎತ್ತಿನ‌ಹೊಳೆ ಯೋಜನೆ ಮತ್ತು ಕೃಷ್ಣಾನದಿ ನೀರನ್ನು ಕ್ಷೇತ್ರಕ್ಕೆ ತರುವುದಾಗಿ ಎರಡು ಬಾರಿ ಆಯ್ಕೆ‌ಯಾಗಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಯೋಜನೆ‌ಯ ನೀರು ಕ್ಷೇತ್ರ‌ಕ್ಕೆ ಬಂದಿಲ್ಲ. ಇದರಿಂದ ಜನರಿಗೆ ನಿರಾಶೆ‌ಯಾಗಿದೆ. ಅವರು ಸುಳ್ಳು ಹೇಳ್ತಾರೆ ಅನ್ನೋದು ಗೊತ್ತಾಗಿದೆ. ಎರಡು ಬಾರಿ ವೀರಪ್ಪ‌ಮೊಯ್ಲಿ ಗೆಲ್ಲಿಸಿದ್ದು ಸಾಕು , ಈ ಬಾರಿ ಬಚ್ಚೇಗೌಡರನ್ನು ಗೆಲ್ಲಿಸಬೇಕೆನ್ನುವ ತಿರ್ಮಾನಕ್ಕೆ ಜನರು ಬಂದಿದ್ದು. ನಾನು ಖಂಡಿತ ಈ ಬಾರಿ ಗೆಲ್ಲುತ್ತೇನೆ ಎಂದರು.

ABOUT THE AUTHOR

...view details