ಗೌರಿಬಿದನೂರು (ಚಿಕ್ಕಬಳ್ಳಾಪುರ):ಅನುಮಾನಾಸ್ಪದ ರೀತಿಯಲ್ಲಿ ಚಿಂತಾಜನಕ ಸ್ಥಿತಿಗೆ ತಲುಪಿರುವ ಒಂದೇ ಕುಟುಂಬದ ನಾಲ್ವರು ಪತ್ತೆಯಾಗಿದ್ದು, ಅದರಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಮರಾಠಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಚಿಂತಾಜನಕ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರು ಪತ್ತೆ: ಯುವತಿ ಸಾವು - Chikkaballapur district news
11:53 November 27
ಸ್ಥಳದಲ್ಲೇ ಹಿರಿಯ ಮಗಳು ಮೃತ
ಹಿರಿಯ ಮಗಳು ಅರ್ಚನಾ (16) ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂದೆ ರಾಮಾಂಜಿನೇಯಲು, ತಾಯಿ ಶಾಂತಮ್ಮ, ಕಿರಿಯ ಮಗಳು ಅಂಕಿತಾ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಳಿ ತಾಳಲಾರದೇ ಮನೆಯಲ್ಲಿ ಕಲ್ಲಿದ್ದಿಲಿನಿಂದ ಹೊಗೆ ಹಾಕಿಕೊಂಡಿದ್ದರು. ನಂತರ ಪ್ರಜ್ಞೆ ತಪ್ಪಿ ಚಿಂತಾಜನಕ ಪರಿಸ್ಥಿತಿಗೆ ತಲುಪಿದ್ದರು ಎನ್ನಲಾಗಿದೆ. ಅದಾಗಲೇ ಕುಟುಂಬದ ಹಿರಿಯ ಮಗಳು ಮೃತಪಟ್ಟಿದ್ದಳು. ಆದರೆ, ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಘಟನೆಯೋ ಎಂಬುದು ತನಿಖೆ ಬಳಿಕ ಗೊತ್ತಾಗಬೇಕಿದೆ.
ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಕುಟುಂಬವರು ಎಂದು ತಿಳಿದು ಬಂದಿದೆ. ಸರ್ಕಲ್ ಇನ್ಸ್ಪೆಕ್ಟರ್ ರವಿ, ಪಿಎಸ್ಐ ಲಕ್ಷ್ಮೀನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.