ಕರ್ನಾಟಕ

karnataka

ETV Bharat / state

ಕರುಣೆ ತೋರೋ ಮಳೆರಾಯ : ಮಳೆಗಾಗಿ ಜಾತ್ರಾ ಮಹೋತ್ಸವ

ಚಿಕ್ಕ ಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ  ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಶ್ರದ್ದಾ ಭಕ್ತಿಯಿಂದ ತಂಬಿಟ್ಟು ಜಾತ್ರಾ ಮಹೋತ್ಸವ ಆಚರಿಸಲಾಯಿತು.

By

Published : Jul 25, 2019, 10:06 AM IST

ಮಳೆಗಾಗಿ ಜಾತ್ರಾ ಮಹೋತ್ಸವ

ಚಿಕ್ಕ ಬಳ್ಳಾಪುರ : ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಶ್ರದ್ದಾ ಭಕ್ತಿಯಿಂದ ತಂಬಿಟ್ಟು ಜಾತ್ರಾ ಮಹೋತ್ಸವ ಆಚರಿಸಲಾಯಿತು.

ಮಳೆಗಾಗಿ ಜಾತ್ರಾ ಮಹೋತ್ಸವ

ಪಟ್ಟಣದ 1, 8, 9, 10, 11 ನೇ ವಾರ್ಡ್ ಹಾಗೂ ಗುಡಿಬಂಡೆ ಗ್ರಾಮೀಣ ಹಾಗೂ ಪಟ್ಟಣ ಹೊರವಲಯದ ಅಮಾನಿ ಬೈರಸಾಗರದ ಬಳಿಯಿರುವ ಒಡ್ಡಮ್ಮ ದೇವಿಗೆ, ಬಿ ಬ್ಲಾಕ್ ನ ಮುತ್ಯಾಲಮ್ಮ, ಬಾಪೂಜಿ ನಗರದ ಸಪ್ಪಲಮ್ಮ ದೇವಿಗೆ ಮಹಿಳೆಯರು ಶ್ರದ್ದಾಭಕ್ತಿಯಿಂದ ತಂಬಿಟ್ಟಿನ ಆರತಿ ದೀಪಗಳನ್ನು ಬೆಳಗುವ ಮೂಲಕ ಗ್ರಾಮ ದೇವತೆಗಳಿಗೆ ಆರತಿ ಪೂಜೆ ಸಲ್ಲಿಸಿದರು.

ತೆಂಗು ಹಾಗೂ ಬಿದಿರು ಕಡ್ಡಿ ಬಳಸಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದ ಆರತಿಗಳು ಎಲ್ಲರ ಆಕರ್ಷಣೆಯಾಗಿತ್ತು. ಅದರಲ್ಲೂ ವಿಶೇಷವಾಗಿ ದೀಪಗಳನ್ನು ಹೊತ್ತ ಮಹಿಳೆಯರು ಈ ವರ್ಷ ಉತ್ತಮ ಮಳೆ ಬೆಳೆ ಬರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು.

ಜಾತ್ರೆ ನೇತೃತ್ವವನ್ನು ಶಿವ, ರಾಮಾಂಜಿ, ಸೋಮಶೇಖರ್, ಲಕ್ಷ್ಮಣ, ಅಪ್ಪಯ್ಯ, ದೇವರಾಜು, ಸುರೇಶ, ಸೀನ, ಪಟ್ಟಣದ ಮುತ್ಯಾಲಮ್ಮ ಮತ್ತು ಸಪ್ಪಲಮ್ಮ ಬಳಗದವರು ಇದ್ದರು.

ABOUT THE AUTHOR

...view details