ಚಿಕ್ಕಬಳ್ಳಾಪುರ: ಪೊಲೀಸ್ ಕಾನ್ಸ್ಟೇಬಲ್ವೋರ್ವ ಮದುವೆಯಾಗಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಅಲ್ಲದೆ, ಆಕೆಯ ಗಂಡನಿಗೆ ಬೆದರಿಕೆ ಹಾಕಿ ಹಣದ ಆಮಿಷವೊಡ್ಡಿ ಪಲ್ಲಂಗದಾಟ ಆಡಿ, ಬಳಿಕ ಕೊಲೆಗೈದಿರುವ ಆರೋಪ ಪ್ರಕರಣ ಜಿಲ್ಲೆಯ ಶಿಡ್ಲಘಟ್ಟ ನಗರಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿವಾಹೇತರ ಸಂಬಂಧ: ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಕೊಲೆ ಆರೋಪ, ಪೊಲೀಸ್ ಕಾನ್ಸ್ಟೇಬಲ್ ಎಸ್ಕೇಪ್ - extra marital affair
Chikkaballapur Murder Case; ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ವಿವಾಹಿತ ಮಹಿಳೆಯನ್ನು ವೇಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ವಿವಾಹೇತರ ಸಂಬಂಧ ಕಾರಣವೆಂದು ತಿಳಿದು ಬಂದಿದೆ.
ನಗರದ ಮಾರಮ್ಮ ದೇವಸ್ಥಾನ ಹಿಂಬಾಗದ ಎಂ.ಆರ್ ಸರ್ಕಲ್ ಬಳಿ ವಾಸವಾಗಿದ್ದ ರಾಜೇಶ್ವರಿ ಮೃತ ಮಹಿಳೆ ಎಂದು ತಿಳಿದು ಬಂದಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಡುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ಅನಂತ್ ಕುಮಾರ್ ಕೊಲೆ ಆರೋಪಿ. ಈತ ರಾಜೇಶ್ವರಿಯ ಗಂಡನಿಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗ್ತಿದೆ.
ಕಳೆದ ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಇಬ್ಬರ ನಡುವೆ ಗಲಾಟೆ ನಡೆದು ಕುಡಿದ ಮತ್ತಿನಲ್ಲಿ ಆಕೆಯ ಕುತ್ತಿಗೆಗೆ ವೇಲಿನಿಂದಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.