ಬಾಗೇಪಲ್ಲಿ:ಕೊರೊನಾ ಸೋಂಕು ಇಲ್ಲಿನ ಜನರ ಜೀವನವನ್ನೇ ಬರಿದುಮಾಡಿದೆ. ಇಂತಹ ವಿಪತ್ತಿನ ಸಂದರ್ಭದಲ್ಲಿ ವೈದ್ಯರೊಬ್ಬರು ಜನರಿಗೆ ಆಸರೆಯಾಗಿದ್ದಾರೆ.
ವೈದ್ಯೋ ನಾರಾಯಣೋ ಹರಿಃ... ಸ್ವಂತ ನರ್ಸಿಂಗ್ ಹೋಂ ಬಿಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯ
ಬಡ ಜನರಿಗೆ ಸಹಾಯ ಮಾಡುವ ಸಲುವಾಗಿ ವೈದ್ಯ ಡಾ. ಅನಿಲ್ ಕುಮಾರ್ ಆವುಲಪ್ಪ ತಮ್ಮ ಸ್ವಂತ ನರ್ಸಿಂಗ್ ಹೋಂ ಬಿಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅವರ ತೀರ್ಮಾನದಂತೆ ಕಳೆದ ಹತ್ತು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ.
ವೈದ್ಯ
ಬಡ ಜನರಿಗೆ ಸಹಾಯ ಮಾಡುವ ಸಲುವಾಗಿ ವೈದ್ಯ ಡಾ. ಅನಿಲ್ ಕುಮಾರ್ ಆವುಲಪ್ಪ ತನ್ನ ಸ್ವಂತ ನರ್ಸಿಂಗ್ ಹೋಂ ಬಿಟ್ಟು ಕೋವಿಡ್ 19 ವಾರಿಯರ್ ಆಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಅವರ ತೀರ್ಮಾನದಂತೆ ಕಳೆದ ಹತ್ತು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲು ಸ್ವಂತ ಖರ್ಚಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮಾತ್ರೆಗಳನ್ನು ಖರೀದಿಸಿ ನಿತ್ಯವೂ ಕೋವಿಡ್ ವಾರಿಯರ್ ಆಗಿ ದುಡಿಯುತ್ತಿದ್ದಾರೆ.