ಚಿಂತಾಮಣಿ:ತಾಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂದನಹಳ್ಳಿ ಗ್ರಾಮದ ಜೆಡಿಎಸ್ ಪಕ್ಷದ 100ಕ್ಕೂ ಹೆಚ್ಚಿನ ಮಂದಿ ಇಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಕ್ಷಣಗಣನೆ ಎಂಬಂತೆ ಅಭ್ಯರ್ಥಿಗಳು ತಮ್ಮದೇ ಆದ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆಯ ನಂತರ ಕೆಂದನಗಳ್ಳಿಯ 30ಕ್ಕೂ ಹೆಚ್ಚಿನ ಕುಟುಂಬಗಳು ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ಡಾ. ಎಂ.ಸಿ ಸುಧಾಕರ್ ಬಣಕ್ಕೆ ಇಂದು ಸೇರಿಕೊಂಡಿದ್ದು ಮಾಜಿ ಶಾಸಕ ಸೇರ್ಪಡೆಗೊಂಡ ಗ್ರಾಮದ ಮುಖಂಡರಿಗೆ ಹೂವಿನ ಹಾರ ಹಾಕಿ ತಮ್ಮ ಬಣ್ಣಕ್ಕೆ ಬರಮಾಡಿಕೊಂಡರು.