ಕರ್ನಾಟಕ

karnataka

ETV Bharat / state

ವ್ಯಕ್ತಿಯ ಕತ್ತು ಸೀಳಿ ರಕ್ತ ಕುಡಿದು ಬೀಭತ್ಸ ಕೃತ್ಯ! ಬೆಚ್ಚಿಬಿದ್ದ ಚಿಕ್ಕಬಳ್ಳಾಪುರ - ಕತ್ತು ಕೊಯ್ದು ರಕ್ತ ಕುಡಿದ ವ್ಯಕ್ತಿ

ವ್ಯಕ್ತಿಯೋರ್ವ ಇನ್ನೋರ್ವ ವ್ಯಕ್ತಿಯ ಕತ್ತನ್ನು ಚಾಕುವಿನಿಂದ ಸೀಳಿ ಬಳಿಕ ರಕ್ತ ಕುಡಿದ ಭಯಾನಕ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

ವ್ಯಕ್ತಿಯ ಕತ್ತು ಸೀಳಿ ರಕ್ತ ಕುಡಿದು ಭೀಬತ್ಸ
ವ್ಯಕ್ತಿಯ ಕತ್ತು ಸೀಳಿ ರಕ್ತ ಕುಡಿದು ಭೀಬತ್ಸ

By

Published : Jun 25, 2023, 12:39 PM IST

Updated : Jun 25, 2023, 1:36 PM IST

ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ಇನ್ನೋರ್ವ ವ್ಯಕ್ತಿಯ ಕತ್ತು ಕೊಯ್ದು ರಕ್ತ ಕುಡಿದಿರುವ ಬೀಭತ್ಸಕಾರಿ ಘಟನೆ ನಾಲ್ಕು ದಿನಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನ ಕತ್ತಿನ ರಕ್ತ ಕುಡಿಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ನಿವಾಸಿ ವಿಜಯ್ ಎಂಬಾತ ಚೇಳೂರು ತಾಲೂಕಿನ ಮಾಡೇಂಪಲ್ಲಿ ನಿವಾಸಿ ಮಾರೇಶ್ ಮೇಲೆ ಹಲ್ಲೆ ಮಾಡಿ, ರಕ್ತ ಕುಡಿದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಮಾರೇಶ್​​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ್​ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಶಿವಮೊಗ್ಗ: ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲೇ ಗಾಂಜಾ ಬೆಳೆದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ

ಕಾರಣವೇನು?: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾರೇಶ್​ನನ್ನು ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ವಿಜಯ್ ಕರೆಸಿಕೊಂಡಿದ್ದ. ಬಳಿಕ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮಾರೇಶ್​ನ ಕತ್ತಿಗೆ ಚಾಕುವಿನಿಂದ ವಿಜಯ್ ಇರಿದು ಹಲ್ಲೆ ಮಾಡಿದ್ದಾನೆ. ಬಳಿಕ ಹಲ್ಲೆಯಿಂದ ಅಸ್ವಸ್ಥನಾಗಿ ಕೆಳಗೆ ಬಿದ್ದ ಮಾರೇಶ್​ನ ಕತ್ತಿನಿಂದ ವಿಜಯ್ ರಕ್ತ ಕುಡಿದಿದ್ದಾನೆ. ಇದನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Living Together: ರಾಜಧಾನಿಯ ನಿದ್ದೆಗೆಡಿಸಿದ ಲಿವಿಂಗ್ ಟುಗೆದರ್: ಕೆಲ ತಿಂಗಳಲ್ಲಿ‌ ನಡೆದ ಸಂಗಾತಿಗಳ ಕೊಲೆಗಳು ಎಷ್ಟು?

ಆನೇಕಲ್​ನಲ್ಲಿ ಮಹಿಳೆಗೆ ಇರಿದ ಯುವಕ: ಆನೇಕಲ್ ಪಟ್ಟಣದಲ್ಲಿ ಶನಿವಾರ ವಿವಾಹಿತ ಮಹಿಳೆಯ ಕುತ್ತಿಗೆಗೆ ಯುವಕನೋರ್ವ ಇರಿದು ತಾನೂ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿತ್ತು. ಮಹಿಳೆ ಮತ್ತು ಯುವಕ ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದು, ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು.

ಬೆಂಗಳೂರಲ್ಲಿ ಪತ್ನಿಗೆ ಇರಿದ ಪತಿ:ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಸೆಂಟ್ ಜೋಸೆಫ್ ಚರ್ಚ್ ಬಳಿ ಜೂನ್ 21 ರಂದು ನಡೆದಿತ್ತು. ಈ ಪ್ರಕರಣ ಸಂಬಂಧ ಪತಿ ದಿವಾಕರ್​ನನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ದಿವಾಕರ್​ಗೆ ಆತನ ಚಿಕ್ಕಪ್ಪನ ಮಗ ಕೂಡ ಸಹಾಯ ಮಾಡಿದ್ದು ಎಂದು ತಿಳಿದುಬಂದಿತ್ತು.

ಹಲ್ಲೆ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದರು. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಪರಿಣಾಮ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಖಿತಾ ಮತ್ತು ದಿವಾಕರ್ 9 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದು, ಕೆಲ ದಿನಗಳಿಂದ ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಫ್ಲೈಓವರ್ ಮೇಲೆ ಬೈಕ್​ನಲ್ಲಿ ಹೋಗುತ್ತಿದ್ದ ಅತ್ತೆಗೆ ಚಾಕು ಇರಿದು ಕೊಂದು ಪರಾರಿಯಾದ ಅಳಿಯ!

Last Updated : Jun 25, 2023, 1:36 PM IST

ABOUT THE AUTHOR

...view details