ಚಿಕ್ಕಬಳ್ಳಾಪುರ: ಹಿಂದಿನ ನಾಲ್ಕು ತಲೆಮಾರು ಹಾಗೂ ಮುಂದಿನ 25 ತಲೆಮಾರಿನ ಜನರಿಗೆ ವೀರ ಸಾವರ್ಕರ್ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಸಾವರ್ಕರ್ ವಿರೋಧಿಗಳ ವಿರುದ್ಧ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವರ್ಕರ್ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿ ಎಲ್ ಸಂತೋಷ್ - B L Santhosh news
ಸ್ವಾತಂತ್ರ್ಯ ಅಮೃತೋತ್ಸವದ ಪ್ರಯುಕ್ತ ಜಿಲ್ಲೆಯ ವಿದುರಾಶ್ವತ್ಥದ ಬಳಿ ಸಮೃದ್ಧ ಭಾರತ ಎನ್‍ಜಿಒ ಸಂಸ್ಥೆ ರೈಡ್ ಫಾರ್ ನೇಷನ್ ಎಂಬ ಬೈಕ್ ರ‍್ಯಾಲಿ ಆಯೋಜಿಸಿತ್ತು. ಈ ಬೈಕ್ ರ್ಯಾಲಿಯಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು
ಬಿ ಎಲ್ ಸಂತೋಷ್
ಈ ಸಂದರ್ಭದಲ್ಲಿ ಮಾತನಾಡಿದ ಬಿ ಎಲ್ ಸಂತೋಷ್, ಸಾವರ್ಕರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಯಾರು ಹೆಸರು ಹೇಳಲು ಯೋಗ್ಯತೆ ಇಲ್ಲದಂತಹ ವಂಶದಲ್ಲಿ ಹುಟ್ಟಿದ್ದಾರೋ ಅಂತವರು ಅವರ ಬಗ್ಗೆ ಮಾತನಾಡುತ್ತಾರೆ. ಹಿಂದಿನ ನಾಲ್ಕು ತಲೆಮಾರು, ಮುಂದಿನ 25 ತಲೆಮಾರಿನ ಜನರಿಗೆ ಸಾವರ್ಕರ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಸಾವರ್ಕರ್ ಫ್ಲೆಕ್ಸ್ ತೆರವು ಗಲಾಟೆ: ನಾಳೆ ಶಿವಮೊಗ್ಗ, ಭದ್ರಾವತಿಯ ಶಾಲೆ ಕಾಲೇಜುಗಳಿಗೆ ರಜೆ