ಕರ್ನಾಟಕ

karnataka

ETV Bharat / state

ಕಣ್ಣು ಹೋದರೂ ಕನಸು ಬಿಡದ‌ ಛಲದಂಕ: ಬ್ರೈಲ್​​ ಲಿಪಿ ಬಳಸದೆ ಪಿಎಚ್​ಡಿ ಪಡೆದ ವಿಶೇಷಚೇತನ!

ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್​​ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದಾರೆ.

Visually impaired man gets PhD from Mysore university
ಬ್ರೈಲ್​​ ಲಿಪಿ ಬಳಸದೆ ಪಿಎಚ್​ಡಿ ಪಡೆದ ವಿಶೇಷಚೇತನ

By

Published : Dec 12, 2020, 3:58 AM IST

ಚಾಮರಾಜನಗರ:ಕಣ್ಣಿದ್ದವರೇ ಓದು ತಲೆಗೆ ಹತ್ತದೇ ಇಲ್ಲವೇ ನಿರಾಸಕ್ತಿಯಿಂದ ಅರ್ಧಕ್ಕೆ ವಿದ್ಯೆ ನಿಲ್ಲಿಸುವವರ ನಡುವೆ ಈ‌ ಅಂಧ ವ್ಯಕ್ತಿ ಮೈಸೂರು ವಿವಿಯಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್ಡಿಗೆ ಭಾಜನರಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್​​ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದಾರೆ.

ಬ್ರೈಲ್​​ ಲಿಪಿ ಬಳಸದೆ ಪಿಎಚ್​ಡಿ ಪಡೆದ ವಿಶೇಷಚೇತನ

ಮೈವಿವಿಯ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆರ್‌.ಎನ್‌.ದಿನೇಶ್ ಮಾರ್ಗದರ್ಶನದಲ್ಲಿ "ಚಾಮರಾಜನಗರ ಜಿಲ್ಲೆಯ ದಿವ್ಯಾಂಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪಾತ್ರ-ಒಂದು ಅಧ್ಯಯನ" ಎಂಬ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್ ಅಡಿ ಪದವಿ ಪಡೆದಿದ್ದಾರೆ. ಮೂರುವರೆ ವರ್ಷ 105 ಶಾಲೆಯ 354 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿ ಸಂಶೋಧನಾ ಪ್ರಬಂಧ ಬರೆದಿದ್ದಾರೆ.

ಬ್ರೈಲ್ ಲಿಪಿ ಬಳಸಲ್ಲ, ವಿಶೇಷ ಶಾಲೆಗೆ ಹೋಗಿಲ್ಲ:

ಮನುಕುಮಾರ್ ಅವರ ಏಕಾಗ್ರತೆಗೆ ಸಾಕ್ಷಿ ಎಂಬಂತೆ ಇಲ್ಲಿಯವರೆಗೂ ಅಂಧರು ಬಳಸುವ ಯಾವುದೇ ಸಾಧನವನ್ನು ಬಳಸದೇ ಸಾಮಾನ್ಯರಂತೆ ಓಡಾಟ ನಡೆಸುತ್ತಾರೆ. ಜೊತೆಗೆ, ಟೇಪ್ ರೆಕಾರ್ಡರ್, ಮೊಬೈಲ್ ಸಹಾಯದ ಮೂಲಕ ಧ್ವನಿ ಮುದ್ರಿಸಿಕೊಂಡು, ಆಡಿಯೋ ಪುಸ್ತಕಗಳನ್ನು ಕೇಳಿ ಸಾಮಾನ್ಯ ಶಾಲೆಯಲ್ಲೇ ಕಲಿತು ರಾಜ್ಯಶಾಸ್ತ್ರ ಎಂಎಯಲ್ಲಿ ಮೈಸೂರು ವಿವಿಯಿಂದ ಎರಡು ಚಿನ್ನದ ಪದಕ, 3 ನಗದು ಬಹುಮಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಇವರಾಗಿದ್ದಾರೆ.

ಮದುವೆಗೆ ನಿರಾಕರಿಸಿದ ತಂದೆ - ಮಗಳು: ಸ್ನೇಹಿತರೊಟ್ಟಿಗೆ ಸೇರಿ ಲಾಂಗು-ಮಚ್ಚು ಝಳಪಿಸಿದ ಕಿಡಿಗೇಡಿ

ಬ್ರೈಲ್ ಲಿಪಿಯನ್ನು ಬಳಸದೇ ಸ್ಕ್ರೈಬ್​ಗಳ ಮೂಲಕವೇ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ಕಣ್ಣಿದ್ದವರಿಗಿಂತ ತಾನೇನೂ ಕಡಿಮೆ ಇಲ್ಲಾ ಎಂದು ಸಾಬೀತು ಪಡಿಸಿದ್ದಾರೆ. ಸದ್ಯ, ಮನುಕುಮಾರ್ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕ ವಿಭಾಗ ಜೊತೆಗೆ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ 3 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ನನ್ನ ಮಗನ ಸಾಧನೆ ನನಗೆ ಹೆಮ್ಮೆ ಇದೆ‌‌‌. ಅಂಧತ್ವವು ಶಿಕ್ಷಣಕ್ಕೆ, ಜೀವನ ಪ್ರೀತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಮನು ತೋರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯಾದ ನಾಗಪ್ಪ ಸಂತಸ ವ್ಯಕ್ತಪಡಿಸಿದರು.

ಇನ್ನು, ಮನುಕುಮಾರ್ ಈಟಿವಿ ಭಾರತದೊಂದಿಗೆ ಮಾತನಾಡಿ, ಕಷ್ಟಪಟ್ಟು ಜೊತೆಗೆ ಇಷ್ಟಪಟ್ಟು ಓದಿದ್ದಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಮುಂದೆಯೂ ಸಹ ಪ್ರಬಂಧಗಳನ್ನು ಬರೆಯುತ್ತೇನೆ. 2015ರಲ್ಲಿ ಕೆಎಎಸ್ ಪ್ರಿಲಿಮ್ಸ್ ಕೂಡ ಪಾಸಾಗಿದ್ದೆ. ಆದರೆ ನನಗೆ ಭೋದನೆಯ ಬಗ್ಗೆ ಹೆಚ್ಚು ಒಲವು ಇರುವುದರಿಂದ ಅತಿಥಿ ಉಪನ್ಯಾಸಕನಾಗಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details