ಕರ್ನಾಟಕ

karnataka

ಟಿಸಿ ಅಳವಡಿಸಿ ಮೂರು ವರ್ಷವಾದರೂ ವಿದ್ಯುತ್ ಸಂಪರ್ಕವಿಲ್ಲ: ರೈತರ ಆಕ್ರೋಶ

By

Published : Apr 12, 2021, 10:59 PM IST

ತಿಮ್ಮರಾಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಿತ್ತಲದೊಡ್ಡಿ ಗ್ರಾಮದ ರಾಜುಗೌಡ ನಗರದಲ್ಲಿ ಸುಮಾರು 30 ಮನೆಗಳಿದ್ದು, ಕುಡಿಯುವ ನೀರಿನ ಪೂರೈಕೆಗಾಗಿ ಗ್ರಾಮ ಪಂಚಾಯಿತಿಯಿಂದ ಮೂರು ವರ್ಷದ ಹಿಂದೆಯೇ 25 ಕೆವಿ ಟಿಸಿ ಅಳವಡಿಸಲಾಗಿತ್ತು. ಆದರೆ, ಟಿಸಿಯು ವಿದ್ಯುತ್ ಸಂಪರ್ಕ ಪಡೆಯದೇ ನಿರುಪಯುಕ್ತವಾಗಿದೆ.

ರೈತರ ಆಕ್ರೋಶ
ರೈತರ ಆಕ್ರೋಶ

ಕೊಳ್ಳೇಗಾಲ:ಕುಡಿಯುವ ನೀರಿನ ಪೂರೈಕೆಗಾಗಿ ಮೂರು ವರ್ಷದ ಹಿಂದೆಯೇ ಅಳವಡಿಸಿದ 25 ಕೆವಿ ಟಿಸಿಗೆ ವಿದ್ಯುತ್ ಸಂಪರ್ಕ ನೀಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ತಿಮ್ಮರಾಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಿತ್ತಲದೊಡ್ಡಿ ಗ್ರಾಮದ ರಾಜುಗೌಡ ನಗರದಲ್ಲಿ ಸುಮಾರು 30 ಮನೆಗಳಿದ್ದು, ಕುಡಿಯುವ ನೀರಿನ ಪೂರೈಕೆಗಾಗಿ ಗ್ರಾಮ ಪಂಚಾಯಿತಿಯಿಂದ ಮೂರು ವರ್ಷದ ಹಿಂದೆಯೇ 25 ಕೆವಿ ಟಿಸಿ ಅಳವಡಿಸಿಲಾಗಿತ್ತು. ಆದರೆ, ಟಿಸಿಯು ವಿದ್ಯುತ್ ಸಂಪರ್ಕ ಪಡೆಯದೇ ನಿರುಪಯುಕ್ತವಾಗಿದೆ.

ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಚುನಾಯಿತ ಸದಸ್ಯರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಸಾವಿರಾರು ರೂ. ಹಣ ವ್ಯಯಿಸಿ ಟಿಸಿ ಅಳವಡಿಸಿದ್ದರು. ವಿದ್ಯುತ್ ಸಂಪರ್ಕವಿಲ್ಲದೇ ನಿರುಪಯುಕ್ತ ವಾಗಿದೆ, ಕೆಲಸ ನಿರ್ವಹಿಸಿದ್ದವರೂ ಇದಕ್ಕೆ ಬರುವ ಎಲ್ಲಾ ಬಿಲ್ ಹಣವನ್ನು ಪಡೆದರು ಸರ್ವಿಸ್ ಕೊಡಿಸಿಲ್ಲ. ಸದ್ಯ ನೀರಿಗಾಗಿ ರೈತರ‌‌‌ಗಾಗಿ ನೀಡಲಾದ ಟಿಸಿಯನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ರಾಜುಗೌಡನಗರದ ವ್ಯಾಪ್ತಿಯಲ್ಲಿರುವ ತೊಂಬೆಗಳಲ್ಲಿ ಸ್ವಚ್ಛತೆ ಮರಿಚೀಕೆಯಾಗಿದ್ದು, ಕೆಲ ತೊಂಬೆಗಳ ನಲ್ಲಿಗಳು ಮುರಿದಿವೆ. ಪಾಚಿ ಕಟ್ಟಿ ಕುಡಿಯುವ ನೀರು ಕಲುಷಿತವಾಗುತ್ತಿದೆ. ಜನರು ರೋಗಗಳಿಗೆ ತುತ್ತಾಗುವ ಆತಂಕ ವ್ಯಕ್ತಪಡಿಸುತ್ತಿದ್ದು, ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಿಶೀಲಿಸಿ ತೊಂಬೆ ದುರಸ್ತಿ ಪಡಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ABOUT THE AUTHOR

...view details