ಚಾಮರಾಜನಗರ: ಮೇಕೆದಾಟು ಅಣೆಕಟ್ಟೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಚಾಮರಾಜನಗರ ಜಿಲ್ಲೆಯಿಂದ ಇಂದು ಬಸ್, ಕಾರುಗಳಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ತೆರಳಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಿಂದ 15ಕ್ಕೂ ಹೆಚ್ಚು ಬಸ್ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು, ಕಾರ್ಯಕರ್ತರು ತೆರಳಿದ್ದು, ಹನೂರು ಹಾಗೂ ಚಾಮರಾಜನಗರ ತಾಲೂಕುಗಳಿಂದ ಅಂದಾಜು 2000 ಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.