ಚಾಮರಾಜನಗರ: ಗ್ರೀನ್ ಝೋನ್ ಜಿಲ್ಲೆಯಲ್ಲಿ ಮೇ.4 ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ನಗರದ ಯುವಕನೊಬ್ಬ ಮದ್ಯದಂಗಡಿಗೆ ಪೂಜೆ ಸಲ್ಲಿಸಿ ಸೋಮವಾರದಿಂದಲಾದರೂ ಎಣ್ಣೆ ಸಿಗಲೆಂದು ಕೋರಿ ಕೊಂಡಿದ್ದಾರೆ.
ಎಣ್ಣೇಶ್ವರನಿಗೆ ಗುಂಡುಪ್ರಿಯನ ಪೂಜೆ... ಸೋಮವಾರವಾದರೂ ಮದ್ಯದಂಗಡಿ ತೆರೆಯಲಿ ದೇವಾ? - ಮದ್ಯದಂಗಡಿಗೆ ಪೂಜೆ
ಮದ್ಯದಂಗಡಿ ಬಾಗಿಲು ತೆರೆದು 30 - 40 ದಿನಗಳಾಗಿದೆ. ಹೀಗಾಗಿ ಯುವಕ ಮದ್ಯದ ಅಂಗಡಿಗೆ ಪೂಜೆ ಸಲ್ಲಿಸಿ ಬರೀ ಆಸೆ ತೋರಿಸದೇ ಈ ಬಾರಿಯಾದರೂ ಅಂಗಡಿ ತೆಗೆಯಿರಿ ಎಂದು ಗಮನ ಸೆಳೆದಿದ್ದಾನೆ.
ಎಣ್ಣೇಶ್ವರನಿಗೆ ಗುಂಡುಪ್ರಿಯನ ಪೂಜೆ
ನಗರದ ಮಹಾದೇವ ಪ್ರಸಾದ್ ಎಂಬ ಯುವಕ ಇಂದು ಎಂಎಸ್ಐಎಲ್ ಮದ್ಯದಂಗಡಿ ಬಾಗಿಲಿಗೆ ಅರಿಶಿಣ - ಕುಂಕುಮದ ಪೂಜೆ ಸಲ್ಲಿಸಿದ್ದಾನೆ. ಈಡುಗಾಯಿ ಒಡೆದು ಎಣ್ಣೆ ಅಂಗಡಿ ತೆರೆದು ಸಂತೋಷ, ಸಂಭ್ರಮ ಕರುಣಿಸಪ್ಪ ಎಂದು ಬೇಡಿಕೊಳ್ಳುವ ಮೂಲಕ ಗುಂಡು ಪ್ರೇಮ ಪ್ರದರ್ಶಿಸಿದ್ದಾನೆ.