ಚಾಮರಾಜನಗರ :ಪೌರಾಣಿಕ ಐತಿಹ್ಯ ಇರುವ ಚಾಮರಾಜನಗರದ ಹರಳುಕೋಟೆ ಆಂಜನೇಯ ದೇವಾಲಯಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುಕೇಶ್ ಕುಮಾರ್ ಶಾ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು.
ನಗರದ ಜ್ಯೋತಿಷಿ ಒಬ್ಬರೊಟ್ಟಿಗೆ ಇಂದು ಹನುಮ ದೇಗುಲಕ್ಕೆ ಪತ್ನಿ ಡಿಂಪಿ ಶಾ ಅವರೊಟ್ಟಿಗೆ ಭೇಟಿ ನೀಡಿದ ನ್ಯಾಯಮೂರ್ತಿಗಳಿಗೆ ಅರ್ಚಕರು ಪೂರ್ಣಕುಂಭ ಸ್ವಾಗತ ಕೋರಿದರು. ಬಳಿಕ, ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.