ಚಾಮರಾಜನಗರ: ತಮಿಳು ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳ ಕಾಲ ಸಾಕ್ಷ್ಯಚಿತ್ರ ಚಿತ್ರೀಕರಣಕ್ಕಾಗಿ ಆಗಮಿಸಿದ್ದು ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ.
ಬಂಡೀಪುರಕ್ಕೆ ಬಂದಿದ್ದಾರೆ ತಲೈವಾ: ಅಕ್ಷಯ್ ಕುಮಾರ್ ಕೂಡ ಬರುವ ಸಾಧ್ಯತೆ - ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ
ಬಂಡೀಪುರ ಹುಲಿ ಯೋಜನೆಯಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಬಂಡೀಪುರಕ್ಕೆ ಆಗಮಿಸಿದ್ದಾರೆ.
rajinikanth
ಬಂಡೀಪುರ ಹುಲಿ ಯೋಜನೆಯಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಸಾಕ್ಷ್ಯಚಿತ್ರದ ಚಿತ್ರೀಕರಣ ಮೂರು ದಿನಗಳ ಕಾಲ ನಡೆಯಲಿದ್ದು ಬುಧವಾರ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ ಎನ್ನಲಾಗ್ತಿದೆ.
ಸಾಕ್ಷ್ಯಚಿತ್ರ ತಯಾರಿಕೆಗೆ ವೈಲ್ಡ್ ಲೈಫ್ ಪಿಸಿಸಿಎಫ್ ಅನುಮತಿ ಪಡೆದಿದ್ದಾರೆ. ಶೂಟಿಂಗ್ಗೆ ಅರಣ್ಯ ಇಲಾಖೆ ಹಲವಾರು ನಿರ್ಬಂಧ ವಿಧಿಸಿ ಅನುಮತಿ ನೀಡಿದೆ. ಈ ಸಂಬಂಧ ತಂತ್ರಜ್ಞರು ಬರುವ ಹಿನ್ನೆಲೆ ಗುಂಡ್ಲುಪೇಟೆ-ಊಟಿ ರಸ್ತೆಯ ಬದಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ.
Last Updated : Jan 28, 2020, 7:38 AM IST