ಚಾಮರಾಜನಗರ:ವರಮಹಾಲಕ್ಷ್ಮಿ ಹಬ್ಬ ಎಂದರೇ ಸಿರಿವಂತರ ಹಬ್ಬ ಎನ್ನುವುದು ಸಾಮಾನ್ಯ. ಆದರೆ, ನಗರದ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ನಿರ್ಗತಿಕರೊಂದಿಗೆ ಹಬ್ಬ ಆಚರಿಸಿ ವಿಶಿಷ್ಟತೆ ಮೆರೆದಿದೆ.
ಅರ್ಥಪೂರ್ಣವಾಗಿ ವರಮಹಾಲಕ್ಷ್ಮಿ ಹಬ್ಬ ಆಚರಣೆ: ನಿರ್ಗತಿಕರಿಗೆ ಸೀರೆ- ಕುಂಕುಮ ಕಾಣಿಕೆ - ವರಮಹಾಲಕ್ಷ್ಮಿ ಹಬ್ಬ,
ಚಾಮರಾಜೇಶ್ವರ ದೇಗುಲ ಆವರಣದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ ನೇತೃತ್ವದಲ್ಲಿ ನಿರ್ಗತಿಕ ಮಹಿಳೆಯರಿಗೆ ಸೀರೆ, ಅರಿಶಿಣ- ಕುಂಕುಮ ಹಾಗೂ ವಿದ್ಯಾರ್ಥಿನಿಯರಿಗೆ ಅರಿಶಿಣ-ಕುಂಕುಮ ನೀಡಿ ನಾಡು ಸುಭೀಕ್ಷವಾಗಿರಲಿ, ಉತ್ತರದಲ್ಲಿನ ವರುಣನ ಅಬ್ಬರ ನಿಲ್ಲಲ್ಲಿ ಎಂದು ಪ್ರಾರ್ಥಿಸಿದರು.

ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆಯು ಕಳೆದ 10 ವರ್ಷದಿಂದ ವರಮಾಹಲಕ್ಷ್ಮಿ ಹಬ್ಬವನ್ನು ನಿರ್ಗತಿಕರೊಂದಿಗೆ ಆಚರಿಸುತ್ತಾ ಬಂದಿದ್ದು, ಹತ್ತಾರು ಮಂದಿಗೆ ಸೀರೆ, ಶಾಲು, ಹಣ್ಣು-ಹಂಪಲು ವಿತರಿಸುತ್ತಾ ಪ್ರತಿವರ್ಷವೂ ವಿನೂತನವಾಗಿ ಆಚರಿಸುತ್ತಾ ಬಂದಿದ್ದಾರೆ. ಈ ವೇಳೆ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಇನ್ನಿತರರು ಇದ್ದರು.