ಕರ್ನಾಟಕ

karnataka

ETV Bharat / state

70 ವರ್ಷದ ಬಳಿಕ ಚಾಮರಾಜೇಶ್ವರನಿಗೆ ವೃಷಭ ವಾಹನ ಸೇವೆ - ಚಾಮರಾಜೇಶ್ವರನಿಗೆ ವೃಷಭ ವಾಹನ ಸೇವೆ

ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ 70 ವರ್ಷದ ಬಳಿಕ ವೃಷಭ ವಾಹನ ಸೇವೆ ಶಿವರಾತ್ರಿ ದಿನವಾದ ಶನಿವಾರ ನಡೆಯಿತು.

ವೃಷಭ ವಾಹನ ಸೇವೆ
ವೃಷಭ ವಾಹನ ಸೇವೆ

By

Published : Feb 18, 2023, 10:52 PM IST

Updated : Feb 18, 2023, 10:58 PM IST

ಚಾಮರಾಜೇಶ್ವರನಿಗೆ ವೃಷಭ ವಾಹನ ಸೇವೆ

ಚಾಮರಾಜನಗರ: ಇಲ್ಲಿಯ ಜಿಲ್ಲಾ ಕೇಂದ್ರದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಇಂದು ವಿಶೇಷ ಎನಿಸುವ ವಿಶಿಷ್ಟ ಸೇವೆ ನಡೆದಿದ್ದು ಮಹಾಶಿವರಾತ್ರಿ ಹಬ್ಬದ ಸಡಗರವನ್ನು ದುಪ್ಪಟ್ಟು ಮಾಡಿದೆ. ಶ್ರೀಚಾಮರಾಜೇಶ್ವರನಿಗೆ ಬರೋಬ್ಬರಿ 70 ವರ್ಷಗಳ ಬಳಿಕ‌ ವೃಷಭ(ನಂದಿ) ವಾಹ‌ನ ಸೇವೆ ನಡೆದಿದ್ದು ಒಂದು ಪೀಳಿಗೆ ಬಳಿಕ ಈ ಆಚರಣೆ ನಡೆದಿದ್ದು ಭಕ್ತರು ಶ್ರದ್ಧಾ ಭಕ್ತಿಯಿಂದ ನಂದಿ ವಾಹನ ಸೇವೆಯಲ್ಲಿ ಪಾಲ್ಗೊಂಡರು.

ದೇವಾಲಯದಲ್ಲಿದ್ದ ವೃಷಭ, ಹಂಸ, ಗಜ, ಅಶ್ವ ವಾಹನಗಳು ಧೂಳು ಹಿಡಿದು ಹಾಳಾಗಿದ್ದವು. ಚಾಮರಾಜೇಶ್ವರ ದೇವಾಲಯ ಜೀರ್ಣೋದ್ಧಾರದ ಬಳಿಕ ಶಾಸಕ‌ ಸಿ.ಪುಟ್ಟರಂಗಶೆಟ್ಟಿ ಅವರ ಇಚ್ಛಾಶಕ್ತಿಯಿಂದ ವಾಹನಗಳು ದುರಸ್ತಿಗೊಂಡಿದ್ದು 70 ವರ್ಷಗಳ ಬಳಿಕ ಇಂದು ನಂದಿ ವಾಹನ ಸೇವೆ ನಡೆದಿದೆ. ಕೆಂಪನಂಜಾಂಬ ಸಮೇತ ಚಾಮರಾಜೇಶ್ವರ ದೇವರ ಉತ್ಸವ ಮೂರ್ತಿಯನ್ನು ನಂದಿ ವಾಹನದಲ್ಲಿಟ್ಟು ನಗರದ ರಥ ಬೀದಿಯಲ್ಲಿ ಉತ್ಸವ ನಡೆಸಲಾಗಿದೆ.

ತಾತನ ಕಾಲದಲ್ಲಿ ಆಗಿತ್ತು:ನಂದಿ ವಾಹನ ಉತ್ಸವ ನಡೆದಿರುವುದು ತಮಗೇ ಗೊತ್ತೇ ಇಲ್ಲಾ, ಆ ರೀತಿ ಆಗಿತ್ತು, ಈ ರೀತಿ ಆಗುತ್ತಿತ್ತು ಎನ್ನುವುದಷ್ಟೇ ನಮಗೆ ಗೊತ್ತು. ಭಕ್ತರ ಆಸೆಯಂತೆ ಉತ್ಸವ ವಾಹನಗಳು ದುರಸ್ತಿಗೊಂಡು 70 ವರ್ಷದ ಬಳಿಕ ಈಗ ಸೇವೆ ನಡೆಯುತ್ತಿದೆ. ಅದನ್ನು ಕಾಣುತ್ತಿರುವುದು ನಮ್ಮ ಭಾಗ್ಯ ಎಂದು ಚಾಮರಾಜನಗರ ಉಪ್ಪಾರ ಮುಖಂಡ ಹಾಗೂ ಚಾಮರಾಜೇಶ್ವರನ ಭಕ್ತರಾದ ಜಯಕುಮಾರ್ ಸಂತಸ ವ್ಯಕ್ತಪಡಿಸಿದರು. ಯಾವುದೇ ದೇವಾಲಯಕ್ಕೂ ಚಾಮರಾಜೇಶ್ವರನ‌ ದೇವಾಲಯ ಕಡಿಮೆ ಇಲ್ಲಾ. ಸಾಲುಗುಡಿಯಲ್ಲಿನ‌ ಮೂರ್ತಿಗಳು, ಶಿವಲೀಲೆಯ ವಿಗ್ರಹಗಳು ಅದ್ಭುತವಾಗಿವೆ. ರಾಜತ್ವ ಮತ್ತು ದೈವತ್ವ ಎರಡೂ ಇರುವ ಏಕಮಾತ್ರ ದೇವಾಲಯ ನಮ್ಮದಾಗಿದ್ದು, ಪ್ರವಾಸಿಗರನ್ನು ಸೆಳೆಯುವ ಕಾರ್ಯ ಆಗಬೇಕಿದೆ ಎಂದರು.

ವಿಶೇಷ ಪೂಜೆ, ಉತ್ಸವ, ಜನಸಾಗರ:ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜೇಶ್ವರನಿಗೆ ಪಂಚಾಮೃತ ಅಭಿಷೇಕ, ಅಷ್ಟ ಮಂಗಳಾರತಿ, ಶಾಲ್ಯನ್ಯ ಅಭಿಷೇಕ, ಬಿಲ್ವಾರ್ಚನೆ ನಡೆದಿದ್ದು ವಿಶೇಷ ಎಂಬಂತೆ 70 ವರ್ಷಗಳ ಬಳಿಕ ದೇವರಿಗೆ ನಂದಿ ವಾಹನ ಸೇವೆ ನಡೆಯುತ್ತಿದ್ದೆ ಎಂದು ಅರ್ಚಕ ಅನಿಲ್ ದೀಕ್ಷಿತ್ ತಿಳಿಸಿದರು. ಇನ್ನು, ದಶಕಗಳ ಬಳಿಕ ನಡೆಯುತ್ತಿರುವ ಉತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಸೇರಿತ್ತು, ಉತ್ಸವದುದ್ದಕ್ಕೂ ಪಂಚಾಕ್ಷರಿ ಮಂತ್ರದ ಜಪ ನಡೆಯಿತು.

ಇದನ್ನೂ ಓದಿ:ಹಾವೇರಿ: ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಸಹಸ್ರಾರು ಭಕ್ತರು

ಇದನ್ನೂ ಓದಿ:ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ - ವಿಡಿಯೋ

ಮೈಸೂರಿನ ಮಹಾರಾಜರು ನಿರ್ಮಿಸಿದ್ದ ದೇಗುಲ:ಚಾಮರಾಜನಗರ ಈ ಹಿಂದೆ ಅರಿಕುಠಾರ ಎಂದು ಹೆಸರಾಗಿತ್ತು.‌ 1776 ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜನಿಸಿದ್ದರಿಂದ ಅರಿಕುಠಾರ ಹೆಸರು ಚಾಮರಾಜನಗರ ಎಂದು ಮರುನಾಮಕರಣಗೊಂಡಿತು. ಚಾಮರಾಜ ಮಹಾರಾಜರ ನೆನಪಿನಲ್ಲೇ ಈ ದೇಗುಲ ನಿರ್ಮಾಣಗೊಂಡಿದ್ದು, ರಾಜತ್ವ ಮತ್ತು ದೈವತ್ವ ಎರಡನ್ನೂ ಒಳಗೊಂಡ ದೇವಾಲಯ ಇದಾಗಿದೆ.

ಇದನ್ನೂ ಓದಿ:ನಂಜುಂಡೇಶ್ವರ, ತ್ರಿನೇಶ್ವರನ ದರ್ಶನ ಪಡೆದ ಭಕ್ತರು: ವಿಶೇಷ ಪೂಜೆ ಸಲ್ಲಿಸಿದ ಯದುವೀರ್ ಕುಟುಂಬ

Last Updated : Feb 18, 2023, 10:58 PM IST

ABOUT THE AUTHOR

...view details