ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸರಣಿ ಕಳ್ಳತನ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ಕಳ್ಳತನ ನಡೆದಿದೆ.
ಬೇಗೂರು ಪೊಲೀಸ್ ಠಾಣೆ ಸಮೀಪವೇ ಸರಣಿ ಕಳ್ಳತನ: ಬಿಯರ್ ಕುಡಿದು ಖದೀಮರು ಗಾಯಬ್! - Begur police station
ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಪೊಲೀಸ್ ಠಾಣೆ ಅನತಿ ದೂರದಲ್ಲಿ ಸರಣಿ ಕಳ್ಳತನ ನಡೆದಿದೆ.
ಬೇಗೂರು ಪೊಲೀಸ್ ಠಾಣೆ ಸಮೀಪವೇ ಸರಣಿ ಕಳ್ಳತನ..
ರಾಘವೇಂದ್ರ ಎಂಟರ್ ಪ್ರೈಸಸ್ ಎಂಬ ರಸಗೊಬ್ಬರದ ಅಂಗಡಿ, ವೈನ್ ಸ್ಟೋರ್ ಹಾಗೂ ಪೆಟ್ಟಿಗೆ ಅಂಗಡಿಗಳಿಗೆ ಕನ್ನ ಹಾಕಿರುವ ಖದೀಮರು, ರಸಗೊಬ್ಬರ ಅಂಗಡಿಯಲ್ಲಿದ್ದ 1.25 ಲಕ್ಷ ರೂ., ವೈನ್ ಸ್ಟೋರ್ನಲ್ಲಿದ್ದ 5 ಸಾವಿರ ರೂ. ಜೊತೆಗೆ ಸಿಸಿಟಿವಿ ಹಾರ್ಡ್ ಡಿಸ್ಕ್ ಹೊತ್ತೊಯ್ದಿದ್ದಾರೆ.
ವೈನ್ ಸ್ಟೋರ್ನಲ್ಲಿದ್ದ ಟಿನ್ ಬಿಯರ್ಗಳನ್ನು ಕುಡಿದು ಪೆಟ್ಟಿಗೆ ಅಂಗಡಿಯಲ್ಲಿದ್ದ ಟೂತ್ ಪೇಸ್ಟ್, ಸೋಪು, ಬೀಡಿ-ಸಿಗರೇಟ್ ಪೊಟ್ಟಣಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.