ಚಾಮರಾಜನಗರ:ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೂಮಳೆ ಪ್ರಕರಣದಿಂದ ಎಚ್ಚೆತ್ತ ಕಂದಾಯ ಸಚಿವ ಆರ್.ಅಶೋಕ್ ಕಾರಿನಿಂದ ಇಳಿದು ಸಭೆ ನಡೆಸುವವರೆಗೂ ಸಾಮಾಜಿಕ ಅಂತರದ ಮಂತ್ರ ಜಪಿಸಿದರು.
ಶ್ರೀರಾಮುಲು ಪ್ರಕರಣದಿಂದ ಎಚ್ಚೆತ್ತ ಅಶೋಕ್: ಸಾಮಾಜಿಕ ಅಂತರದ ಮಂತ್ರ ಜಪಿಸಿದ ಸಚಿವ! - ಚಾಮರಾಜನಗರ ಸುದ್ದಿ
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗಾಗಿ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್,ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು.
ಶ್ರೀರಾಮುಲು ಪ್ರಕರಣದಿಂದ ಎಚ್ಚೆತ್ತ ಅಶೋಕ್..ನಡುವೆ ಅಂತರದ ಮಂತ್ರ ಜಪಿಸಿದ ಸಚಿವ!
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗಾಗಿ ಜಿಲ್ಲೆಗೆ ಆಗಮಿಸಿದ ಸಚಿವ, ಕಾರಿನಿಂದ ಇಳಿದು ಹ್ಯಾಂಡ್ ಸ್ಯಾನಿಟೈಸರ್ ಬಳಸಿ, ಯಾರೊಂದಿಗೂ ಕೈ ಕುಲಕದೇ ಸಾಮಾಜಿಕ ಅಂತರವಿರಲಿ, ಸಾಮಾಜಿಕ ಅಂತರವಿರಲಿ ಎಂದರು.
ಅಲ್ಲದೇ, ಇಲಾಖೆಗೆ ಸಂಬಂಧಪಡದ ಅಧಿಕಾರಿಗಳಿದ್ದರೆ ಸಭೆಯಲ್ಲಿ ಭಾಗಿಯಾಗುವುದು ಬೇಡ. ಎರಡನೇ ಹಂತದ ಅಧಿಕಾರಿಗಳು ಇರುವುದು ಬೇಡ. ಎಲ್ಲರೂ ದೂರ - ದೂರ ಕುಳಿತುಕೊಳ್ಳೋಣ ಎಂದು ಎಚ್ಚರಿಸಿದರು.