ಕರ್ನಾಟಕ

karnataka

ETV Bharat / state

ಕಾವೇರಿ ಆರ್ಭಟ.. ತಮಿಳುನಾಡಿನ ಮೆಟ್ಟೂರು ಡ್ಯಾಂನಿಂದ ನೀರು ಬಿಡುಗಡೆ..

ಜಲಾಶಯ 120 ಅಡಿ ಗರಿಷ್ಠ ಮಟ್ಟ ಇದ್ದು, 94 ಅಡಿ ನೀರು ಶೇಖರಣೆಗೊಂಡಿದೆ. ಈ ಹಿನ್ನೆಲೆ ತಮಿಳುನಾಡಿನ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಜಲಾಶಯಕ್ಕೆ ಪೂಜೆ ಸಲ್ಲಿಸಿ ನೀರು ಹೊರಬಿಟ್ಟಿದ್ದಾರೆ.

ಕಾವೇರಿ ಆರ್ಭಟ: ತಮಿಳುನಾಡಿನ ಮೆಟ್ಟೂರು ಡ್ಯಾಂನಿಂದ ನೀರು ಬಿಡುಗಡೆ

By

Published : Aug 13, 2019, 10:31 AM IST

ಚಾಮರಾಜನಗರ: ಕಳೆದ 6 ದಿನಗಳಿಂದ ಕಾವೇರಿಯ ಆರ್ಭಟಕ್ಕೆ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂದ ಹಿನ್ನೆಲೆ ಇಂದು 3 ಸಾವಿರ ಘನ ಅಡಿ ನೀರನ್ನು ಹೊರಬಿಡಲಾಗಿದೆ.

ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಜಲಾಶಯಕ್ಕೆ ಪೂಜೆ ಸಲ್ಲಿಸುತ್ತಿರುವುದು..

ಕಾವೇರಿ ಪಾತ್ರದಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯ ಬಹುಪಾಲು ಭರ್ತಿಯಾಗಿದೆ. ಜಲಾಶಯ 120 ಅಡಿ ಗರಿಷ್ಠ ಮಟ್ಟ ಇದ್ದು, 94 ಅಡಿ ನೀರು ಶೇಖರಣೆಗೊಂಡಿದೆ. ಈ ಹಿನ್ನೆಲೆ ತಮಿಳುನಾಡಿನ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಜಲಾಶಯಕ್ಕೆ ಪೂಜೆ ಸಲ್ಲಿಸಿ ನೀರು ಹೊರಬಿಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಅಲ್ಲಿನ ಸರ್ಕಾರ 168 ದಿನಗಳವರೆಗೆ ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಹೊರಬಿಡಲಿದ್ದು 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ರೈತರು ಇದರ ಲಾಭ ಪಡೆಯಲಿದ್ದಾರೆ.

ABOUT THE AUTHOR

...view details