ಕೊಳ್ಳೇಗಾಲ, ಚಾಮರಾಜನಗರ:ಬೇಟೆಗಾರರಿಂದ ಮಾಂಸ ಖರೀದಿಸಿ ಕೊಂಡೊಯ್ಯುತ್ತಿದ್ದ ದಂಪತಿಯನ್ನು ಬಂಧಿಸಿರುವ ಘಟನೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಸೇರಿದ ಪಿ.ಜಿ.ಪಾಳ್ಯ-ಲೊಕ್ಕನಹಳ್ಳಿ ರಸ್ತೆಯಲ್ಲಿ ನಡೆದಿದೆ.
ಗುಳ್ಳದಬಯಲು ಗ್ರಾಮದ ನಾಗೇಶ್ ಹಾಗೂ ಈತನ ಪತ್ನಿ ಮಾದೇವಿ ಬಂಧಿತ ಆರೋಪಿಗಳಾಗಿದ್ದು, ರಾಮಾಪುರ ಗ್ರಾಮದ ಸೋಮು ಎಂಬಾತ ನಾಪತ್ತೆಯಾಗಿದ್ದಾನೆ. ಸೋಮುವಿನಿಂದ ಈ ದಂಪತಿ ಬೇಟೆಯಾಡಿದ್ದ ಕಡವೆ ಮಾಂಸವನ್ನು ಖರೀದಿಸಿ ಬೈಕ್ನಲ್ಲಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ವನ್ಯ ಜೀವಿಧಾಮದ ಡಿಸಿಎಫ್ ಏಡುಕೊಂಡಲು ಮಾರ್ಗದರ್ಶನದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.