ಚಾಮರಾಜನಗರ:ಸಾರಿಗೆ ನೌಕರರ ಮುಷ್ಕರದ ಮೂರನೇ ದಿನವಾದ ಇಂದು 18 ಬಸ್ ಸಂಚಾರ ನಡೆಸಿದ್ದು, ವಿಭಾಗಕ್ಕೆ 3 ದಿನಗಳಿಂದ ಒಂದೂವರೆ ಕೋಟಿ ರೂ. ಆದಾಯ ನಷ್ಟವಾಗಿದೆ.
ಈ ಕುರಿತು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಚಾಮರಾಜನಗರ ಡಿಪೋಗಳಿಂದ 18 ಬಸ್ ಸಂಚಾರ ನಡೆಸಿದ್ದು 23 ಸಾವಿರ ರೂ. ಕಲೆಕ್ಷನ್ ಆಗಿದೆ. ಒಒಡಿ ಮೇಲಿದ್ದ ಮೂವರು ಟಿಸಿಗಳು ಕಂಡಕ್ಷರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.