ಚಾಮರಾಜನಗರ :ಹೆಲ್ಮೆಟ್ ರಹಿತ ಹಾಗೂ ವಾಹನದ ಇನ್ಶೂರೆನ್ಸ್ ಇಲ್ಲದ ವೃದ್ಧರೊಬ್ಬರಿಗೆ ಪೊಲೀಸರು ದಂಡ ವಿಧಿಸುವ ವೇಳೆ, ಆ ವೃದ್ಧ ವ್ಯಕ್ತಿ ನಾನು ಹಿರಿಯ ನಾಗರಿಕ, ನನಗೆ ದಂಡದಲ್ಲಿ ವಿನಾಯ್ತಿ ನೀಡಬೇಕೆಂದು ಪಟ್ಟು ಹಿಡಿದ ಘಟನೆ ನಗರದಲ್ಲಿ ನಡೆಯಿತು.
ಸಂಚಾರಿ ದಂಡದಲ್ಲೂ ವಿನಾಯಿತಿ ನೀಡಿ ಎಂದು ಪೊಲೀಸರಿಗೆ ಪಟ್ಟು ಹಿಡಿದ ವೃದ್ಧ ನಗರದ ನಗರಸಭೆ ಬಳಿ ವಾಹನ ತಪಾಸಣೆ ಮಾಡುವ ವೇಳೆ ಅದೇ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಕೃಷ್ಣಸ್ವಾಮಿ ಎಂಬುವರ ವಾಹನವನ್ನು ಪೊಲೀಸರು ತಡೆದರು.
ವಾಹನದ ದಾಖಲೆ ಪರಿಶೀಲಿಸುವ ವೇಳೆ, ಹೆಲ್ಮೆಟ್ ಇಲ್ಲದಿರುವುದು, ವಾಹನದ ಇನ್ಶೂರೆನ್ಸ್ ಇಲ್ಲದಿರುವ ಬಗ್ಗೆ ತಿಳಿದ ಪೊಲೀಸರು ದಂಡ ಕಟ್ಟುವಂತೆ ವೃದ್ಧನಿಗೆ ಹೇಳಿದ್ದಾರೆ.
ಇದನ್ನು ಓದಿ : ಪಕ್ಷದ ವಿರುದ್ಧ ಮಾತಾಡುವುದರಿಂದ ನೀವು ಮಂತ್ರಿಯಾಗಲ್ಲ.. ಹಳ್ಳಿಹಕ್ಕಿಗೆ ಸಚಿವ ಈಶ್ವರಪ್ಪ ಟಾಂಗ್
ಪೊಲೀಸರು ದಂಡ ಕಟ್ಟಲು ಹೇಳುತ್ತಿದ್ದಂತೆ ಸಿಟ್ಟಿಗೆದ್ದ ವೃದ್ದ ಕೃಷ್ಣಸ್ವಾಮಿ, ನೀವು ಹೇಳಿದಷ್ಟು ದಂಡ ಕಟ್ಟಲು ಸಾಧ್ಯವಿಲ್ಲ. ನಾನು ಹಿರಿಯ ನಾಗರಿಕ, ನನಗೆ ಬಸ್ ಸೌಲಭ್ಯದಲ್ಲಿ ವಿನಾಯತಿ ಇದೆ.
ಅದೇ ರೀತಿ ದಂಡ ವಿಧಿಸುವಲ್ಲಿ ನನಗೆ ವಿನಾಯಿತಿ ನೀಡಲೇಬೇಕು ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಬಳಿಕ ಪೊಲೀಸರು ಹರಸಾಹಸ ಪಟ್ಟು ಸಮಾಧಾನಪಡಿಸಿ ಪೂರ್ತಿ ದಂಡ ವಸೂಲಿ ಮಾಡಿ ಕಳುಹಿಸಿದರು.