ಚಾಮರಾಜನಗರ:ಗುಡಿಸಲಿನೊಂದಿಗೆ ತಾಯಿ-ಮಗಳು ಭಸ್ಮವಾಗಿರುವ ಘಟನೆ ಗಡಿಭಾಗವಾದ ತಮಿಳುನಾಡಿಗೆ ಒಳಪಡುವ ಮಲ್ಲನಗುಳಿಯಲ್ಲಿ ನಡೆದಿದೆ.
ರಾಜಮ್ಮ (34) ಹಾಗೂ ಗೀತಾ (19) ಮೃತ ದುರ್ದೈವಿಗಳು. ಗುಡಿಸಲು ಕೂಡ ಸಂಪೂರ್ಣ ಭಸ್ಮವಾಗಿದ್ದು ತಾಯಿ ಮಗಳು ಸುಟ್ಟು ಬೂದಿಯಾಗಿದ್ದಾರೆ. ಕಳೆದ 10 ವರ್ಷಗಳ ಹಿಂದೆ ರಾಜಮ್ಮಳ ಪತಿಯೂ ತೀರಿಕೊಂಡಿದ್ದು ಮಗ ಕಳೆದ ತಿಂಗಳ ಹಿಂದೆಯಷ್ಟೆ ಕೇರಳಕ್ಕೆ ಗುಳೆ ಹೋಗಿದ್ದ ಎಂದು ತಿಳಿದುಬಂದಿದೆ.