ಕರ್ನಾಟಕ

karnataka

ETV Bharat / state

ಇಶಾ ಫೌಂಡೇಶನ್​​​​ ವತಿಯಿಂದ ಕಾವೇರಿ ಕೂಗು ಅಭಿಯಾನ

ಜಿಲ್ಲೆಯಲ್ಲಿ ರೈತರಿಗೆ ಅರಣ್ಯ ಕೃಷಿ ಕುರಿತು ಇಶಾ ಸ್ವಯಂ ಸೇವಕರು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಕಾವೇರಿ ಕೂಗು ಅಭಿಯಾನ

By

Published : Aug 7, 2019, 11:03 AM IST

ಚಾಮರಾಜನಗರ:ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಪ್ರಾರಂಭಿಸಿರುವ ಕಾವೇರಿ ಕೂಗು ಅಭಿಯಾನದ ಪ್ರಯುಕ್ತ ಜಿಲ್ಲಾದ್ಯಂತ ಇಶಾ ಸ್ವಯಂ ಸೇವಕರು ಅರಣ್ಯ ಕೃಷಿ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಇಶಾ ಫೌಂಡೇಶನ್​ ವತಿಯಿಂದ ಕಾವೇರಿ ಕೂಗು ಅಭಿಯಾನ

8 ತಂಡಗಳ ಮೂಲಕ ಕಾವೇರಿ ನದಿ ಪಾತ್ರದ ಜಿಲ್ಲೆಗಳ ಪ್ರತಿ ಗ್ರಾಮದಲ್ಲಿ ಅರಣ್ಯ ಕೃಷಿಗೆ ಉತ್ತೇಜಿಸುತ್ತಿರುವ ಇಶಾ ಕಾರ್ಯಕರ್ತರು, ರೈತರು ಆರ್ಥಿಕವಾಗಿ ಸದೃಢವಾದಂತೆ ಮಣ್ಣಿನ ಸವಕಳಿಯನ್ನು ತಡೆಗೆಟ್ಟಬಹುದು ಎಂದು ಕರಪತ್ರಗಳು, ವಿಡಿಯೋಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಭೂಮಿಯ ಸಾಮಾರ್ಥ್ಯವನ್ನು ಅರಣ್ಯ ಕೃಷಿಯ ಮೂಲಕ ಶೇ‌. 40ಕ್ಕೆ ವೃದ್ಧಿಸುವುದು ಅಭಿಯಾನದ ಗುರಿಯಾಗಿದ್ದು, ಕಾವೇರಿ ನದಿ ಪಾತ್ರದ ಪ್ರದೇಶದಲ್ಲಿ 242 ಕೋಟಿ ಗಿಡಗಳನ್ನು ನೆಟ್ಟು ಮರವಾಗಿಸುವ ಗುರಿ ಇಶಾ ಸಂಸ್ಥೆಯಾಗಿದೆ. ಪ್ರಾರಂಭದ ಗುರಿ 73 ಕೋಟಿ ಗಿಡ ನೆಡುವುದಾಗಿದೆ ಎಂದು ಇಶಾ ಸ್ವಯಂ ಸೇವಕ ಅಭಿನಂದನ್ ತಿಳಿಸಿದರು.

ಅರಣ್ಯ ಕೃಷಿ ಚಾಮರಾಜನಗರ ಭಾಗಕ್ಕೆ ಪೂರಕವಾಗಿದ್ದು, ಮಳೆಯಾಶ್ರಿತ ಪ್ರದೇಶವಾದ ಜಿಲ್ಲೆಗೆ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯವನ್ನು ಪಡೆಯಬಹುದಾಗಿದೆ. ಅಂತರ್ಜಲ ವೃದ್ಧಿಯೂ ಆಗಲಿದೆ ಎಂದು ಅಭಿಯಾನದ ಕುರಿತು ದೇಮಹಳ್ಳಿ ಗ್ರಾಮಸ್ಥ ಮಂಜುನಾಥ್ ಅಭಿಪ್ರಾಯಪಟ್ಟರು.

ಇನ್ನು, ಸೆ. 3ರಿಂದ ಸದ್ಗುರು ಕೊಡಗಿನ ತಲಕಾವೇರಿಯಿಂದ ಬೈಕ್ ರ್ಯಾಲಿ ಮೂಲಕ ಕಾವೇರಿ ಪಾತ್ರದ ಜಿಲ್ಲೆಗಳ ಮೂಲಕ ಅರಣ್ಯ ಕೃಷಿ ಕುರಿತು ಅರಿವು ಮೂಡಿಸಿ, ಕಾವೇರಿ ನದಿಗೆ ಪುನರುಜ್ಜೀವನ ಕೊಡುವ ಕಾರ್ಯ ಮಾಡಲಿದ್ದಾರೆ.

ABOUT THE AUTHOR

...view details