ಚಾಮರಾಜನಗರ: ನಗರದ 18ನೇ ವಾರ್ಡ್‌ನ ಉಪ್ಪಾರ ಬಡಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮನೆಯಲ್ಲಿಯೇ ಅಕ್ರಮ ಮದ್ಯ ಮಾರಾಟ: 50 ಸಾವಿರ ಮೌಲ್ಯದ ಮದ್ಯ ವಶ - chamarajanagar crime news
ಆರೋಪಿಯಿಂದ 90 ಲೀಟರ್ ದೇಶಿಯ ಮದ್ಯ, 30 ಲೀಟರ್ ಬಿಯರ್ ಸೇರಿದಂತೆ 57 ಸಾವಿರ ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Illegal liquor sale in chamarajanagar
ರವಿ (35) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 90 ಲೀಟರ್ ದೇಶಿಯ ಮದ್ಯ, 30 ಲೀಟರ್ ಬಿಯರ್ ಸೇರಿದಂತೆ 57 ಸಾವಿರ ರೂ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದೂರಿನ ಹಿನ್ನೆಲೆ ಅಬಕಾರಿ ಸಬ್‌ಇನ್‌ಸ್ಪೆಕ್ಟರ್ ಅನುವಂತ್ ಸಿಂಗ್ ನೇತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ ರವಿ, ರಾಜೇಶ್, ಸೋಮಣ್ಣ ದಾಳಿ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.