ಚಾಮರಾಜನಗರ:ಮೀಸಲಾತಿ ಬೇಕೆಂದರೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಗೆ ಮತ ಹಾಕಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾದ್ಮಕ ಹೇಳಿಕೆ ನೀಡಿದ್ದಾರೆ.
ಕೊಳ್ಳೇಗಾಲದಲ್ಲಿ ಸಂಸದ ಧ್ರುವನಾರಾಯಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಭಾರತದ ಚುನಾವಣೆಯನ್ನು ಗಮನಿಸುತ್ತಿದೆ. ಅಂಬೇಡ್ಕರ್ ರೂಪಿಸಿದ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಅಪಾಯದ ಕುರಿತು ಚಿಂತಿಸಬೇಕಿದೆ. ಮೀಸಲಾತಿ ಬೇಕು ಎನ್ನುವ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಬಿಜೆಪಿಗೆ ಒಂದೇ ಒಂದು ಮತ ಹಾಕಬಾರದು ಎಂದರು.
ಸಂವಿಧಾನ ಬದಲಾಯಿಸಲು ಅದು ಮಗ್ಗಿ ಪುಸ್ತಕವಲ್ಲ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಾರೆ. ಅಷ್ಟಕ್ಕೂ ಸಂವಿಧಾನ ಬದಲಾವಣೆಯ ಮಾತನ್ನಾಡಿದ್ದು ಯಾರೋ ಸಾಮಾನ್ಯನಲ್ಲ, ಮೋದಿ ಸಂಪುಟದ ಸಚಿವರೇ ಹೇಳಿದ್ದು. ಈ ಹೇಳಿಕೆ ಬಗ್ಗೆ ಅವರ ಅಭಿಪ್ರಾಯ ಏನು ಎಂದು ಪ್ರಶ್ನಿಸಿದರು.