ಕರ್ನಾಟಕ

karnataka

By

Published : Dec 3, 2020, 6:56 PM IST

ETV Bharat / state

ನಾನು ಅಧ್ಯಕ್ಷನಾದರೆ ಚಾಮರಾಜನಗರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಡಾ.ಮಹೇಶ್ ಜೋಶಿ

ರಾಜ್ಯಾದ್ಯಂತ ಇದುವರೆಗೆ ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರದಲ್ಲಿ ಸಮ್ಮೇಳನಗಳು ನಡೆದಿಲ್ಲ. ಮುಂಬರುವ ಕಸಾಪ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಜಯಗಳಿಸಿದರೆ ಚಾಮರಾಜನಗರಲ್ಲಿ ಸಮ್ಮೇಳನ ಮಾಡಿಯೇ ತೀರುತ್ತೇನೆ ಎಂದು ಚಂದನ ವಾಹಿನಿಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಮಹೇಶ್ ಜೋಶಿ ತಿಳಿಸಿದರು.

Dr. Mahesh Joshi
ಡಾ.ಮಹೇಶ್ ಜೋಶಿ

ಚಾಮರಾಜನಗರ:ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದರೆ ಚಾಮರಾಜನಗರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಚಂದನ ವಾಹಿನಿಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಮಹೇಶ್ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡಲು ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೇವಾ ಆಕಾಂಕ್ಷಿಯಾಗಿದ್ದೇನೆ ಹೊರತು ಅಭ್ಯರ್ಥಿಯಲ್ಲ. ಚಾಮರಾಜನಗರ ಜಿಲ್ಲೆಯು ಜನಪದ ಕಲೆಗಳ ತವರೂರಾಗಿದ್ದು ಇಂತಹ ಐತಿಹಾಸಿಕ ಜಾನಪದ ನಾಡಲ್ಲಿ ಸಾಹಿತ್ಯ ಸಮ್ಮೇಳನ‌ ಮಾಡುವುದು ನನ್ನ ಗುರಿಯಾಗಿದೆ ಎಂದರು.

ಚಂದನ ವಾಹಿನಿಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಮಹೇಶ್ ಜೋಶಿ

ರಾಜ್ಯಾದ್ಯಂತ ಇದುವರೆಗೆ ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರದಲ್ಲಿ ಸಮ್ಮೇಳನಗಳು ನಡೆದಿಲ್ಲ. ಮುಂಬರುವ ಕಸಾಪ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಜಯಗಳಿಸಿದರೆ ಚಾಮರಾಜನಗರಲ್ಲಿ ಸಮ್ಮೇಳನ ಮಾಡಿಯೇ ತೀರುತ್ತೇನೆ ಎಂದರು.

'ಗ್ರಾಮ ಸ್ವರಾಜ್ಯ' ಸಮಾವೇಶಗಳು ಕೇವಲ ಪಕ್ಷ ಸಂಘಟನೆಗಷ್ಟೇ ಸೀಮಿತವಾಗದಿರಲಿ; ಹೆಚ್​ಡಿಕೆ ಸಲಹೆ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಲವು ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸಿ ಕಸಾಪವನ್ನು ಜನರ ಪರಿಷತ್ತಾಗಿ ಹತ್ತಿರ ಮಾಡುವುದು ನನ್ನ ಧ್ಯೇಯ. ಕಸಾಪ ಸದಸ್ಯತ್ವ ಪ್ರಕ್ರಿಯೆಯನ್ನು ಸರಳಗೊಳಿಸಿ ಡಿಜಿಟಲ್ ಆ್ಯಪ್ ಮೂಲಕ ಸದಸ್ಯತ್ವ ಪಡೆಯವಂತಾಗುವ ಯೋಜನೆ ರೂಪಿಸಿದ್ದೇನೆ ಎಂದು ಹೇಳಿದರು.

ಕಸಾಪ ಶುದ್ಧೀಕರಣ ಮಾಡುವುದು ನನ್ನ ಆದ್ಯತೆಯಾಗಿದೆ. ರಾಜ್ಯಾದ್ಯಂತ ಕಸಾಪ ಸದಸ್ಯರು ಹಾಗೂ ಮತದಾರರ ಅಭಿಪ್ರಾಯ ಪಡೆಯುತ್ತಿದ್ದು, ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ. ಕನ್ನಡ ಅನ್ನದ ಭಾಷೆಯಾಗಬೇಕು, ಉದ್ಯೋಗ ಭಾಷೆಯಾಗಬೇಕು, ಕನ್ನಡ ಬೆಳವಣಿಗೆ ದೃಷ್ಟಿಯಿಂದ ಈ ಬಾರಿ ಮತದಾರರು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.

ABOUT THE AUTHOR

...view details