ಕರ್ನಾಟಕ

karnataka

ETV Bharat / state

ಕಾಲುಬಾಯಿ ಜ್ವರ: ಕಾಡಂಚಿನ 12 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಲು ಮುಂದಾದ ಅರಣ್ಯ ಇಲಾಖೆ - Chamarajanagar news

ಜಾನುವಾರುಗಳಿಗೆ ಕಾಲುಬಾಯಿ ಜ್ವರ ಸಾಂಕ್ರಾಮಿಕ ರೋಗ ಬಾಧಿಸುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆಯು ಸುಮಾರು 12 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲು ನಿರ್ಧರಿಸಿದೆ.

chamarajanagar
ಜಾನುವಾರುಗಳಿಗೆ ಲಸಿಕೆ

By

Published : Jun 19, 2021, 11:28 AM IST

ಚಾಮರಾಜನಗರ: ಜಾನುವಾರುಗಳಿಗೆ ಕಾಲುಬಾಯಿ ಜ್ವರ ಸಾಂಕ್ರಾಮಿಕ ರೋಗ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ ನೀಡಲು ಅರಣ್ಯ ಇಲಾಖೆ ಮುಂದಾಗಿದೆ.

ಪಶುಸಂಗೋಪನಾ ಇಲಾಖೆಯು ಇನ್ನೂ ಅಭಿಯಾನ ಆರಂಭಿಸದಿರುವುದರಿಂದ ಜಾನುವಾರುಗಳಿಂದ ವನ್ಯಜೀವಿಗಳಿಗೆ ಈ ಸಾಂಕ್ರಾಮಿಕ ರೋಗ ಹರಡದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. 12 ಸಾವಿರ ಲಸಿಕೆ ಖರೀದಿಸಿ ಪಶುಸಂಗೋಪನೆ ಇಲಾಖೆಗೆ ಹಸ್ತಾಂತರಿಸಲು ಬಂಡೀಪುರ ಸಿಎಫ್ ನಿರ್ಧಸಿದ್ದಾರೆ.

ಜಾನುವಾರುಗಳಿಗೆ ಲಸಿಕೆ

ಗುಂಡ್ಲುಪೇಟೆ ತಾಲೂಕಿನಲ್ಲಿ 73,250 ಜಾನುವಾರುಗಳಿದ್ದು, ಕಾಡಂಚಿನ 89 ಗ್ರಾಮಗಳ 29,047 ಜಾನುವಾರುಗಳಲ್ಲಿ 1,661 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಉಳಿದ ಜಾನುವಾರುಗಳಿಗೆ ಲಸಿಕೆ ಹಾಕಲು ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯಿಂದ 12 ಸಾವಿರ ಲಸಿಕೆ ಖರೀದಿಸಲಾಗುತ್ತಿದೆ.

ಇನ್ನು ಕುಂದಕೆರೆ ವಲಯದಲ್ಲಿ ಈಗಾಗಲೇ ಲಸಿಕೆ ನೀಡುವ ಕಾರ್ಯಕ್ರಮ ಭರದಿಂದ ಸಾಗಿದೆ.

ABOUT THE AUTHOR

...view details