ಚಾಮರಾಜನಗರ : ಜಿಂಕೆ ಬೇಟೆಯಾಡಿ ತೋಟದ ಮನೆಯಲ್ಲಿ ಮಾಂಸ ಪಾಲು ಮಾಡುತ್ತಿದ್ದವರನ್ನು ಪತ್ತೆಹಚ್ಚಿ ಬಂಧಿಸಿರುವ ಪ್ರಕರಣ ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ಜಡೇಸ್ವಾಮಿ, ಅಜ್ಜಿಪುರ ಗ್ರಾಮದ ಕೃಷ್ಣಸ್ವಾಮಿ, ಕೆ.ಗುಂಡಾಪುರ ಗ್ರಾಮದ ಕದರಯ್ಯ, ಸನಾಉಲ್ಲಾ, ತೌಸಿಫ್ ಬಂಧಿತರು. ಗೂಳ್ಯ ಗ್ರಾಮದ ನಾರಾಯಣ ಎಂಬಾತ ಪರಾರಿಯಾಗಿದ್ದಾನೆ.
ಜಿಂಕೆ ಮಾಂಸ ಪಾಲು ಮಾಡುತ್ತಿದ್ದ ಐವರು ಬೇಟೆಗಾರರು ಜೈಲುಪಾಲು - ಜಿಂಕೆ
ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಜಿಂಕೆ ಬೇಟೆ ಆಡಿದ ಐವರನ್ನು ಮಾಂಸ ಸಹಿತ ಬಂಧಿಸಿದ್ದಾರೆ.
ಜಿಂಕೆ ಮಾಂಸ ಪಾಲು ಮಾಡುತ್ತಿದ್ದ ಐವರು ಬೇಟೆಗಾರರು ಜೈಲುಪಾಲು
ನಾಡ ಬಂದೂಕಿನಿಂದ ಇವರು ಜಿಂಕೆ ಬೇಟೆಯಾಡಿ ತೋಟದ ಮನೆಯಲ್ಲಿ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ ಒಂದು ನಾಡ ಬಂದೂಕು, ಜಿಂಕೆ ಮಾಂಸ, ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಟ್ರ್ಯಾಕ್ಟರ್ ಟ್ರಾಲಿ, ಕೃಷಿ ಉಪಕರಣಗಳ ಕಳವು ಪ್ರಕರಣ : ಆರೋಪಿಗಳ ಬಂಧನ