ಚಾಮರಾಜನಗರ: ಗುಂಡ್ಲುಪೇಟೆ ಕಬ್ಬಳ್ಳಿ ತಾಲೂಕಿನ ಗ್ರಾಮದ ಬಳಿ ಸ್ಥಾಪಿಸಲಾಗಿರುವ ಏಟ್ರಿಯಾ ಸೋಲಾರ್ ವಿದ್ಯುತ್ ಉತ್ಪಾದನಾ ಸಂಸ್ಥೆ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಭಾನುವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಏಟ್ರಿಯಾ ಸೋಲಾರ್ ವಿದ್ಯುತ್ ಉತ್ಪಾದನಾ ಸಂಸ್ಥೆಗೆ ಬೀಗ ಜಡಿದು ಪ್ರತಿಭಟನೆ - ಚಾಮರಾಜನಗರ ಸುದ್ದಿ
ಏಟ್ರಿಯಾ ಸೋಲಾರ್ ವಿದ್ಯುತ್ ಉತ್ಪಾದನಾ ಸಂಸ್ಥೆ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಸಮಸ್ಯೆ ಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ವಿದ್ಯುತ್ ಘಟಕ ಸ್ಥಾಪನೆ ಮಾಡುವ ಸಲುವಾಗಿ ರೈತರ ಭೂಮಿಯನ್ನು ಎಕರೆಗೆ 15 ಲಕ್ಷದಂತೆ ತಿರ್ಮಾನ ಮಾಡಿದರು. ಬಳಿಕ ಟ್ಯಾಕ್ಸ್ ಸಮಸ್ಯೆ ಆಗುತ್ತದೆ ಎಂದು 3.6 ಲಕ್ಷಕ್ಕೆ ನೋಂದಣಿ ಮಾಡಿ ಉಳಿದ ಹಣವನ್ನು ಹೇಳಿದ ಮಾತಿನಂತೆ ಕೊಡುತ್ತೇನೆ ಎಂದು ಜಮೀನು ನೋಂದಣಿ ಆದ ಬಳಿಕ ಕಳೆದ ಮೂರು ವರ್ಷಗಳಿಂದ ಹಣ ನೀಡದೆ ಪರದಾಡಿಸುತ್ತಿದ್ದಾರೆ ಎಂದು ಜಮೀನು ನೀಡಿದ ರೈತರು ಆರೋಪಿಸಿದರು.
ಈ ಬಗ್ಗೆ ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಸಮಸ್ಯೆ ಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಲ್ಲೇಶ, ನಟರಾಜು, ಸಂತೋಷ, ಗಿರಿ, ಮಹೇಶ ಶಾಂತಪ್ಪ ಮೊದಲಾದವರು ಭಾಗವಹಿಸಿದ್ದರು.