ಚಾಮರಾಜನಗರ: ಆಹಾರ ಅರಸಿ ನಾಡಿಗೆ ಬಂದ ಜಿಂಕೆಯೊಂದು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಗೋಮಾತೆಯನ್ನು ಅಪ್ಪಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿಯಲ್ಲಿ ನಡೆದಿದೆ.
ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಗೋಮಾತೆ ಅಪ್ಪಿದ ಜಿಂಕೆ! - cow
ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಜಿಂಕೆಯೊಂದು ಗೋಮಾತೆಯನ್ನು ಅಪ್ಪಿದ ಘಟನೆ ನಡೆದಿದೆ. ಕೂಡಲೇ ಅರಣ್ಯಧಿಕಾರಿಗಳು ದೌಡಾಯಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ.
deer
ಓಂಕಾರ್ ಅರಣ್ಯ ವಲಯದಿಂದ ಆಹಾರ ಅರಸಿ ಬಂದ 2 ವರ್ಷದ ಗಂಡು ಜಿಂಕೆಗೆ ಬೀದಿನಾಯಿಗಳ ಹಿಂಡು ಎದುರಾಗಿದೆ. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ದನದ ಕೊಟ್ಟಿಗೆಗೆ ನುಗ್ಗಿದೆ.
ಬಳಿಕ, ರೈತ ಮಹಾದೇವ ನಾಯಿಗಳನ್ನು ಓಡಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯಧಿಕಾರಿಗಳು ದೌಡಾಯಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ.