ಕೊಳ್ಳೇಗಾಲ(ಚಾಮರಾಜನಗರ): ಜಿಲ್ಲೆಯು ಕೋವಿಡ್-19 ಮುಕ್ತವಾಗಿರಲು ಅನುಸರಿಸಿದ ಕಾರ್ಯ ವಿಧಾನಗಳು ಹಾಗೂ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಡಳಿತ ಹೊರ ತಂದಿರುವ 'ಚಾಮರಾಜನಗರ ಜಿಲ್ಲೆಯ ಯಶೋಗಾಥೆ' ಎಂಬ ಪುಸ್ತಕವನ್ನ ಸಚಿವ ಸುರೇಶ್ ಕುಮಾರ್ ಬಿಡುಗಡೆ ಮಾಡಿದರು.
ಕೊರೊನಾ ಮುಕ್ತ ಚಾಮರಾಜನಗರ ಜಿಲ್ಲೆಯ ಯಶೋಗಾಥೆ ಕುರಿತು ಪುಸ್ತಕ ಬಿಡುಗಡೆ - chamrajanagar news
ಚಾಮರಾಜನಗರ ಜಿಲ್ಲೆಯು ಕೋವಿಡ್-19 ಮುಕ್ತವಾಗಿರಲು ಅನುಸರಿಸಿದ ಕಾರ್ಯ ವಿಧಾನಗಳು ಹಾಗೂ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತ ಚಾಮರಾಜನಗರ ಜಿಲ್ಲೆಯ ಯಶೋಗಾಥೆ ಎಂಬ ಪುಸ್ತಕವನ್ನ ಸಚಿವ ಸುರೇಶ್ ಕುಮಾರ್ ಬಿಡುಗಡೆ ಮಾಡಿದರು.
ಕೊಳ್ಳೇಗಾಲ ತಾಲೂಕು ಪಂಚಾಯಿತಿಯಲ್ಲಿ ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಪ್ರವೇಶ ಮಾಡದಂತೆ ತೆಗೆದುಕೊಂಡಿರುವ ಸಕಾಲಿಕ ಕ್ರಮ ಹಾಗೂ ಕಾರ್ಯ ವಿಧಾನಗಳು ಗಮನಾರ್ಹ. ಜಿಲ್ಲಾಡಳಿತ ಹೊರ ತಂದಿರುವ ಈ ಪುಸ್ತಕ ಇಡೀ ರಾಜ್ಯಕ್ಕೆ ಮಾದರಿ. ಅಧಿಕಾರಿಗಳು ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮಗೆ ಜವಾಬ್ದಾರಿ ಇನ್ನೂ ಹೆಚ್ಚಿದ್ದು, ಈಗಾಗಲೇ ತೆಗೆದುಕೊಂಡಿರುವ ಎಚ್ಚರಿಕೆ ಕ್ರಮಗಳು ಮುಂದುವರೆಯಬೇಕು.
ಕೊರೊನಾ ಮುಕ್ತ ಎಂಬ ಹಿರಿಮೆಯನ್ನ ಶಾಶ್ವತವಾಗಿ ಉಳಿಸಿಕೊಳ್ಳುವುದು ಸವಾಲಾಗಿದ್ದು, ಇದನ್ನ ಯಶಸ್ವಿಯಾಗಿ ನಿಭಾಯಿಸಬೇಕೆಂದು ಎಂದು ಸಲಹೆ ನೀಡಿದ್ದಾರೆ.