ಚಾಮರಾಜನಗರ: ಕಾಡೊಳಗೆ ಮೂಲಸೌಕರ್ಯದಿಂದ ವಂಚಿತವಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಚಂಗಡಿ ಗ್ರಾಮಸ್ಥರ ಸ್ಥಳಾಂತರಕ್ಕೆ ಸಿದ್ಧತೆ ನಡೆಯುತ್ತಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಂತಿಮ ಹಂತದ ಸಭೆ ನಡೆಸಿದರು. ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಸಚಿವರಿಗೆ ಗ್ರಾಮಸ್ಥರು ಒಪ್ಪಿಗೆ ನೀಡಿದರು.
ಮೂಲಸೌಕರ್ಯ ವಂಚಿತ ಚಂಗಡಿ ಗ್ರಾಮ ಜಿಲ್ಲಾಡಳಿತ ಗುರುತಿಸಿರುವ ಕೊಳ್ಳೆಗಾಲ ತಾಲೂಕಿನ ಚಿಕ್ಕಲ್ಲೂರು ಬದಲು ಮಲೆಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಬಳಿ ಸ್ಥಳ ನೀಡುವಂತೆ ಕೆಲ ಗ್ರಾಮಸ್ಥರು ಬೇಡಿಕೆ ಇಟ್ಟರು.
ಗ್ರಾಮಸ್ಥರೊಂದಿಗೆ ಪರಿಶೀಲನೆಯಲ್ಲಿ ಸಚಿವರು ಆದರೆ, ಇದಕ್ಕೆ ಶಾಸಕ ನರೇಂದ್ರ ಮುಖ್ಯ ರಸ್ತೆಯಲ್ಲಿ ಎಲ್ಲಿಯೂ ಜಾಗವಿಲ್ಲ, ಪರಿಶೀಲಿಸುವುದಾಗಿ ತಿಳಿಸಿದರು. ಇದಕ್ಕೆ ಎಸಿ ಸಮೀಕ್ಷೆ ಬಳಿಕ ಎಲ್ಲರೂ ಒಪ್ಪುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು.
ಗ್ರಾಮಸ್ಥರೊಂದಿಗೆ ಪರಿಶೀಲನೆಯಲ್ಲಿ ಸಚಿವರು 225 ಕುಟುಂಬಗಳು ವಾಸಿಸುತ್ತಿರುವ ಅರಣ್ಯದೊಳಗಿನ ಚಂಗಡಿ ಗ್ರಾಮವನ್ನು ಸಮೀಕ್ಷೆ ನಡೆಸಲು ಎಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಚಿವರು ಸೂಚಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಈ ವರ್ಷಾಂತ್ಯಕ್ಕೆ ಚಂಗಡಿ ಗ್ರಾಮಸ್ಥರು ಹೊಸ ಬಾಳ್ವೆ ಆರಂಭಿಸಲಿದ್ದಾರೆ.
ಮೂಲಸೌಕರ್ಯ ವಂಚಿತ ಚಂಗಡಿ ಗ್ರಾಮ