ಕರ್ನಾಟಕ

karnataka

ETV Bharat / state

ಚಾಮರಾಜನಗರ.. 60 ಮಂದಿಗೆ ಸೋಂಕು, 84 ಮಂದಿ ಗುಣಮುಖ - chamarajanagara covid news

90ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡು ಕಳೆದ 30ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ..

chamarajanagara-corona-news-2020
ಚಾಮರಾಜನಗರ

By

Published : Oct 5, 2020, 8:27 PM IST

ಚಾಮರಾಜನಗರ :ಜಿಲ್ಲೆಯಲ್ಲಿಂದು 60 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4475ಕ್ಕೆ ಏರಿಕೆಯಾಗಿದೆ. ಓರ್ವ ವೃದ್ಧ ಸೋಂಕಿಗೆ ಮೃತರಾಗಿದ್ದಾರೆ.

ಇಂದು 84 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 858 ಆಗಿದೆ. 38 ಮಂದಿ ಸೋಂಕಿತರು ಐಸಿಯುನಲ್ಲಿದ್ದು, 376 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ‌. 943 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಇಂದು ಬಿಡುಗಡೆಯಾದವರಲ್ಲಿ 60 ವರ್ಷ ದಾಟಿದ 91 ವರ್ಷದ ವ್ಯಕ್ತಿ ಸೇರಿದಂತೆ 19 ಮಂದಿ ಇದ್ದು, ಇವರಲ್ಲಿ ಹೋಂ ಐಸೋಲೇಷನ್‌ನಲ್ಲಿದ್ದವ್ರೇ ಹೆಚ್ಚಿರುವುದು ವಿಶೇಷ.

ಮೃತರ ವಿವರ :ಚಾಮರಾಜನಗರದ 90ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡು ಕಳೆದ 30ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.

ಇನ್ನು, ಮೃತರ ಅಂತ್ಯಸಂಸ್ಕಾರವನ್ನು ಸ್ವಯಂ ಸೇವಕರು ಕೋವಿಡ್ ನಿಯಮಾನುಸಾರ ಗೌರವಯುತವಾಗಿ ನೆರವೇರಿಸಿದ್ದಾರೆ.

ABOUT THE AUTHOR

...view details