ಚಾಮರಾಜನಗರ: ಚಿರತೆ ಉಗುರು, ಹಲ್ಲುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿದಳ ಸಿಬ್ಬಂದಿ ದಾಳಿ ನಡೆಸಿದ್ದು, ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಮೂವರನ್ನು ಬಂಧಿಸಿದ್ದಾರೆ.
ಚಾಮರಾಜನಗರ: ಮೂವರು ಬೇಟೆಗಾರರ ಬಂಧನ, 18 ಚಿರತೆ ಉಗುರು, 8 ಹಲ್ಲು ವಶ - ಮೂವರು ಬೇಟೆಗಾರರ ಬಂಧನ
ಚಿರತೆ ಉಗುರು ಮತ್ತು ಹಲ್ಲುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
Arrest of three poachers in chamarajanagar
ತಮಿಳುನಾಡು ಮೂಲದ ಜವರಯ್ಯ (52), ಕೆಂಪ (55) ಹಾಗು ತಮ್ಮಯ್ಯ (45) ಬಂಧಿತರು. ಚಿರತೆ ಉಗುರುಗಳಿಗೆ ಕಾಳಸಂತೆಯಲ್ಲಿ ಭಾರಿ ಬೇಡಿಕೆ ಇದೆ ಎಂಬ ತಪ್ಪು ತಿಳುವಳಿಕೆ ಹಾಗೂ ಹಲ್ಲು, ಉಗುರುಗಳಿಂದ ತಾಯ್ತಾ ಮಾಡಿಕೊಂಡರೆ ಒಳಿತಾಗುತ್ತದೆ ಎಂಬ ಮೂಢನಂಬಿಕೆಯಿಂದ ಈ ಕೃತ್ಯ ಎಸಗಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ. ಈ ಪೈಕಿ ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮೈತುಂಬಾ ಬಾಸುಂಡೆ ಬರುವಂತೆ ಥಳಿಸಿದ ವಾಚ್ಮ್ಯಾನ್